Wednesday, January 15, 2025
HomeUncategorizedಗಣಿತವು ವ್ಯಕ್ತಿಯ ಯಶಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ-ಹೇಮಂತ್ ಕೋಲಾರ

ಗಣಿತವು ವ್ಯಕ್ತಿಯ ಯಶಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ-ಹೇಮಂತ್ ಕೋಲಾರ

ಗಣಿತವು ಕೇವಲ ತರಗತಿಗಳಿಗೆ ಮಾತ್ರವಲ್ಲದೇ ಅದರಾಚೆಗೂ ಕೂಡ ಗಣಿತವನ್ನು ಅಳವಡಿಸಿಕೊಂಡಿರುತ್ತೇವೆ. ಒಬ್ಬ ವ್ಯಕ್ತಿಗೆ ಬದುಕಲು ವಿಜ್ಞಾನ ಎಷ್ಟು ಮುಖ್ಯವೋ, ಗಣಿತವು ಅಷ್ಟೆ ಮುಖ್ಯ.

ಅಂಕಿಗಳ ಅನಂತವನ್ನೂ ತಿಳಿದಿರುವ ಮತ್ತು ಪ್ರತಿ ಸಂಖ್ಯೆಯಲ್ಲೂ ಒಂದೊಂದು ಕಥೆಯನ್ನು ನೋಡಬಲ್ಲ ಮಹಾನ್ ಗಣಿತ ಶಾಸ್ತ್ರಜ್ಞರಾದ ಸರ್ ಶ್ರೀ ಶ್ರೀನಿವಾಸ ರಾಮಾನುಜನ್ ರವರ ಜನ್ಮದಿನವನ್ನು ಸ್ಮರಿಸಬೇಕು. ಏಕೆಂದರೆ ಗಣಿತ ಹೊಸ ದೃಷ್ಟಿಕೋನವನ್ನೇ ನೀಡಿದ ತಜ್ಜ. ಅವರ ಜನ್ಮ ದಿನವೇ ರಾಷ್ಟ್ರೀಯ ಗಣಿತ ದಿನ.

ಗಣಿತವು ನಮ್ಮ ನಿತ್ಯ ಜೀವನದಲ್ಲಿ ನಾನಾ ಅಂಶಗಳ ಸಮಸ್ಯೆಗಳ ಬಗೆಹರಿಸುವಿಕೆಗೆ ಒಂದು ಮೆಟ್ಟಿಗಲ್ಲು ಮತ್ತು ಜನ ಸಾಮಾನ್ಯರ ಜೀವನವನ್ನು ಸರಳೀಕರಣ ಮಾಡಲು ಅವಶ್ಯಕವಾಗಿದೆ. ಗಣಿತವು ಕೇವಲ ಒಂದು ವಿಷಯವಾಗಿ ಅಧ್ಯಯನ ಮಾಡುವುದಲ್ಲ, ಅದು ನಮ್ಮ ಒಂದು ಭಾಷೆಯಾಗಿ ರೂಢಿಸಿಕೊಳ್ಳಬೇಕು. ನಮ್ಮಲ್ಲಿರುವ ಮಾನಸಿಕ ಸಾಮರ್ಥ್ಯವನ್ನು ಹೊರಗೆಳೆಯಲು ಗಣಿತವೆಂಬ ಅಸ್ತ್ರ ಜೀವನಕ್ಕೆ ಬರಬೇಕಾಗುತ್ತದೆ.

ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೂ ಗಣಿತವನ್ನು ಒಂದಲ್ಲ ಒಂದು ವಿಭಿನ್ನ ವಿಭಿನ್ನ ರೀತಿಯಲ್ಲಿ ಬಳಕೆಮಾಡುತ್ತಿರುತ್ತೇವೆ. ಆದ್ದರಿಂದ ನಾವು ಈ ವಿಷಯದ ಬಗ್ಗೆ ಭಯಪಡದೇ, ಇಷ್ಟಪಟ್ಟಾಗ ಮಾತ್ರ ಇದು ಸುಲಭವೆನಿಸುತ್ತದೆ.

ನಮ್ಮ ಬಾಲ್ಯದಿಂದಲೂ ಅಂದರೆ ಮಗುವಿನ ಹುಟ್ಟಿದ ಸಮಯದಿಂದ ಮುಂದುವರಿದು, ಸಂಕಲನ ವ್ಯವಕಲನದಿಂದ ಪ್ರಾರಂಭವಾಗಿ, ಉನ್ನತ ಶಿಕ್ಷಣವನ್ನು ವನ್ನು ಗಣಿತ ವಿಷಯವಾಗಿ ಕಲಿಯಬಹುದು.
ದಿನ ನಿತ್ಯದ ವ್ಯವಹಾರದಲ್ಲಿ, ಅಳತೆಯಲ್ಲಿ, ವಯಸ್ಸಿನಲ್ಲಿ, ವೇಗದಲ್ಲಿ, ಸಮಯದಲ್ಲಿ ಗಣಿತವು ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ವೃದ್ಧಿಸುತ್ತದೆ.

ಒಟ್ಟಾರೆಯಾಗಿ ಗಣಿತವನ್ನು ಇಷ್ಟಪಡುವುದೇ ಆದರೆ, ದೈನಂದಿನ ಅಸ್ತಿತ್ವ ಮತ್ತು ಜ್ಞಾನದ ಅನ್ವೇಷಣೆಯಲ್ಲಿ ಗಣಿತದ ಒಳನೋಟದ ಸೌಂದರ್ಯ ಮತ್ತು ಮಹತ್ವವನ್ನು ಅರಿಯಬಹುದು.
ಹಾಗಾಗಿ ಗಣಿತವು ವ್ಯಕ್ತಿಯ ಯಶಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಎಲ್ಲರಿಗೂ ರಾಷ್ಟ್ರೀಯ ಗಣಿತ ದಿನದ ಶುಭಾಶಯಗಳು.

ಹೇಮಂತ್ ಕೋಲಾರ
ಎಂ.ಎಸ್ಸಿ ವಿದ್ಯಾರ್ಥಿ
ಬೆಂಗಳೂರು ವಿಶ್ವವಿದ್ಯಾನಿಲಯ.

RELATED ARTICLES
- Advertisment -
Google search engine

Most Popular