ಮಂಗಳೂರು : ಬಜಪೆ, ಸ್ವಾಮಿಲಪದವು ರೋಟರಿ ಕ್ಲಬ್ ನಲ್ಲಿ ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯಿಂದ ಮಾತೃ ಧ್ಯಾನ, ಮಾತೃ ವಂದನಾ, ಮಾತೃ ಭೋಜನ ಕಾರ್ಯಕ್ರಮವು ಭಾನುವಾರ ನಡೆಯಿತು.
ಗಣೇಶ್ ಅಣ್ಣ ಅಧ್ಯಕ್ಷತೆ ವಹಿಸಿದ್ದರು. ಎಂ ಆರ್ ಪಿ ಎಲ್ ಸಂಸ್ಥೆಯ ಉದ್ಯೋಗಿ ಪ್ರಮೀಳದೀಪಕ್ ಪೆರ್ಮುದೆ, ರೋಟರಿ ಕ್ಲಬ್ ಅಧ್ಯಕ್ಷರಾದ ಜೋಕಿಮ್ ಡಿ ಕೋಸ್ಟಾ, ಕಾವೂರು ನಗರ ಸಂಚಾಲಕರಾದ ಶ್ರೀನಿವಾಸ ಜೋಶಿ, ಆನಂದ, ಪದ್ಮನಾಭ, ಉಮೇಶ್, ಮಾಧವ ಕೆ. ಉಪಸ್ಥಿತರಿದ್ದರು. ತುಳು ಒಕ್ಕೂಟ ಶಾಖೆಯ ಶಿಕ್ಷಕಿ ಶುಭ ಪ್ರಾಸ್ತವಿಕ ಮಾತನಾಡಿದರು.
ಭಜನೆ, ಆಟೋಟಗಳು, ನಗುವೆ ಯೋಗ ನಂತರ ಸಭಾ ಕಾರ್ಯಕ್ರಮ ನಡೆಸಲಾಯಿತು.ಶುಭ ಕಾರ್ಯಕ್ರಮ ನಡೆಸಿಕೊಟ್ಟರು. ಸುಜಾತ ಸ್ವಾಗತಿಸಿದರು.ಶರ್ಮಿಳ ನಿರೂಪಿಸಿದರು. ಮಂಜುಳ ವಂದಿಸಿದರು.