ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಕೊಂಚಾಡಿ ಮಂಗಳೂರು ಇಲ್ಲಿ ಎಸ್ಪಿವೈಎಸ್ಎಸ್ ಯೋಗ ಸಮಿತಿ ವತಿಯಿಂದ ತಾರೀಕು 27 -11- 2024 ಭಾನುವಾರ ಮಾತೃ ವಂದನಾ, ಮಾತೃಧ್ಯಾನ ಹಾಗೂ ಮಾತ್ರ ಭೋಜನ ಕಾರ್ಯಕ್ರಮವನ್ನು ನಡೆಸಲಾಯಿತು.
ಶಾಲೆಯ ಪ್ರಾಚಾರ್ಯರಾದ ಸತೀಶ್ ಮಹಾಲಿಂಗಪುರ. ಎಸ್ ಪಿ ವೈ ಎಸ್ ಎಸ್ ಕಾವೂರು ನಗರದ ಸಂಚಾಲಕರಾದ ಶ್ರೀನಿವಾಸಣ್ಣ, ಜಿಲ್ಲಾ ಪ್ರಮುಖರು, ನಗರ ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಿತು.
ಮಧ್ಯಾಹ್ನ 2:40ಕ್ಕೆ ಭಜನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು. ನಂತರ ವಿವಿಧ ಆಟೋಟಗಳು, ನಗುವೆ ಯೋಗ, ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಪ್ರಸ್ತಾವಿಕ ಭಾಷಣವನ್ನು ಜಿಲ್ಲಾ ಪ್ರಮುಖರಾದ ಈಶ್ವರ್. ಅಧ್ಯಕ್ಷತೆಯನ್ನು ಅನಿತ ವಹಿಸಿದರು ಹಾಗು ಮುಖ್ಯ ಅತಿಥಿಯಾಗಿ ಸನಾತನಸಂಸ್ಥೆಯ ಮಾರ್ಗದರ್ಶಕರಾದ ರತ್ನಾ ಭಟ್ ಉಪಸ್ಥಿತರಿದ್ದರು. ಮಾತೃಧ್ಯಾನ ಮತ್ತು ಮಾತೃ ವಂದನಾವನ್ನು ಈಶ್ವರ್ ಅವರು ನಡೆಸಿಕೊಟ್ಟರು. ಮಹಾಲಕ್ಷ್ಮಿ ಸ್ವಾಗತಿಸಿದರು. ಶಿಲ್ಪಾ ನಿರೂಪಿಸಿದರು. ರುಕ್ಮಿಣಿ ವಂದನಾರ್ಪಣೆ ಸಲ್ಲಿಸಿದರು.