ಮುಂಡ್ಕೂರು : ಪೇರೂರು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಯಲ್ಲಿ ಸಿರಿಗಳ ವಾರ್ಷಿಕ ಆಯಾನೋತ್ಸವವು ಮೇ.1 ನೇ ಬುಧವಾರದಂದು ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನವಕ ಪ್ರಧಾನ ಹೋಮ, ಗಣಹೋಮ, ಸಂಜೆ 5 ಗಂಟೆಗೆ ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ರಾತ್ರಿ 7.30 ರಿಂದ ನಾಗ ಸನ್ನಿಧಿಯಲ್ಲಿ ನಾಗ ದರ್ಶನ ರಾತ್ರಿ ಗಂಟೆ 8 ರಿಂದ 10 ರ ವರೆಗೆ ಅನ್ನಸಂತರ್ಪಣೆ ನಡಯಲಿದೆ. 8.30 ರಿಂದ ಕುಮಾರ ಚಾವಡಿಯಿಂದ ದರ್ಶನ ಸಮೇತ ಭಂಡಾರ ಬಂದು ಆಯನೋತ್ಸವ ನಡೆಯುತ್ತದೆ. ರಾತ್ರಿ 9.30 ರಿಂದ ಬ್ರಹ್ಮಲಿಂಗೇಶ್ವರ ದರ್ಶನ ,10.30 ರಿಂದ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಬ್ರಹ್ಮ ತಂಬಿಲ ನಾಗ ಸನ್ನಿಧಿಯಲ್ಲಿ ನಾಗ ತಂಬಿಲ ನಡೆಯಲಿದೆ.