Sunday, July 21, 2024
Homeಕ್ರೀಡೆಮೇ.12: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಂಭ್ರಮೋತ್ಸವ -2024 ಮತ್ತು ಕ್ರೀಡೋತ್ಸವ

ಮೇ.12: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಂಭ್ರಮೋತ್ಸವ -2024 ಮತ್ತು ಕ್ರೀಡೋತ್ಸವ

ಬಂಟ್ವಾಳ: ಆದಿದ್ರಾವಿಡ ನೌಕರರ ಸಂಘ, ಬಂಟ್ವಾಳ ಇದರ ಆಶ್ರಯದಲ್ಲಿ ಬಿ. ಆರ್. ಅಂಬೇಡ್ಕರ್ ಜಯಂತಿ ಸಂಭ್ರಮೋತ್ಸವ -2024 ಮತ್ತು ಉದ್ಘಾಟನೆ, ಕ್ರೀಡೋತ್ಸವ, ಬಹುಮಾನ ವಿತರಣೆ, ಸಮಾರೋಪ ಸಮಾರಂಭವು ಎಸ್.ವಿ.ಎಸ್.ಪ್ರೌಢ ಶಾಲೆ ಬಂಟ್ವಾಳದಲ್ಲಿ ಮೇ.12 ನೇ ಆದಿತ್ಯವಾರ ಬೆಳಿಗ್ಗೆ 9 ರಿಂದ ನಡೆಯಲಿದೆ.

ಮಹಿಳೆಯರ ಮುಕ್ತ ವಿಭಾಗದ ಕಬ್ಬಡ್ಡಿ ಪಂದ್ಯಾಟ ಪ್ರವೇಶ ಶುಲ್ಕ 500/- ಹಾಗೂ ಪ್ರಥಮ 3000/- ದ್ವಿತೀಯ 2000/- ನಗದು ಬಹುಮಾನ. ತ್ರೋಬಾಲ್ ಪಂದ್ಯಾಟ (ಲೀಗ್ ಮಾದರಿಯ ಪಂದ್ಯಾಟ) ಪ್ರಥಮ 5000/- ದ್ವಿತೀಯ 3000/- ಮತ್ತು ಪುರುಷರ ವಿಭಾಗದ 10 ತಂಡಗಳ ಬಂಟ್ವಾಳ ತಾಲೂಕು ಮಟ್ಟದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಪ್ರಥಮ 8000/- ದ್ವಿತೀಯ 5000/- ಪ್ರವೇಶ ಶುಲ್ಕ 2000. ಮುಕ್ತ ವಿಭಾಗದ ಕಬ್ಬಡ್ಡಿ ಪಂದ್ಯಾಟ ಪ್ರವೇಶ ಶುಲ್ಕ 700/- ಪ್ರಥಮ 5000/- ದ್ವಿತೀಯ 3000/- ತೃತೀಯ 2000/- ಚತುರ್ಥ 1000/- ವಿಜೇತರಿಗೆ “ಭೀಮರತ್ನ “ಟ್ರೋಫಿ ನೀಡಲಾಗುವುದು.

ನಿಯಮಗಳು:

  • ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಲು ಆದಿದ್ರಾವಿಡ ಸಮಾಜ ಬಾಂಧವರಿಗೆ ಮಾತ್ರ ಅವಕಾಶ. ಸ್ಪರ್ದಿಸುವ ಕ್ರೀಡಾ ಪಟುಗಳು ಆಧಾರ್ ಕಾರ್ಡ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ದ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು, ಆಕ್ಷೇಪಣೆ ಇದ್ದಲ್ಲಿ ಪರಿಶೀಲಿಸುವುದು.
  • ಆದಿ ದ್ರಾವಿಡ ಬಿಟ್ಟು ಇತರ ಜಾತಿಯವರನ್ನು ಆಡಿಸಿ ಕಂಡು ಬಂದಲ್ಲಿ ಆ ತಂಡವನ್ನು ಪ್ರವೇಶ ಶುಲ್ಕ ಹಿಂದಿರುಗಿ ಸದೆ ಪಂದ್ಯಾಟ ದಿಂದ ಕೈ ಬಿಡಲಾಗುವುದು.
  • ವಿಜೇತರ ಬಹುಮಾನ / ಟ್ರೋಫಿಯನ್ನು ದಿ. 12.5.2024 ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು. ದಿನಾಂಕ 12.5.2024 ಮಧ್ಯಾಹ್ನದಂದು ಊಟದ ವ್ಯವಸ್ಥೆ ಇದೆ.
RELATED ARTICLES
- Advertisment -
Google search engine

Most Popular