ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಟ್ಕದೂರು ಮುದ್ರಾಡಿಯಲ್ಲಿ ಇಂದು ತಾ.13 ಮತ್ತು ನಾಳೆ ತಾ.14 ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಇಂದು ಸಂಜೆ ಗಂಟೆ 4 ರಿಂದ ಹೆಬ್ರಿ ಕೆಳಪೇಟೆಯಿಂದ ತಾಣಾದವರಿಗೆ – ಮುದ್ರಾಡಿಯಿಂದ ಶ್ರೀ ಕ್ಷೇತ್ರದವರಿಗೆ ಜನಪದ, ಭಜನೆ, ಹಾಗೂ ಚಂಡೆ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.
ನಾಳೆ ತಾ.14 ರಂದು ಬೆಳಿಗ್ಗೆ ಕೊರಗಜ್ಜನ ಪ್ರತಿಷ್ಠೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ. ಸಂಜೆ ಗಂಟೆ 4 ರಿಂದ ವ್ಯಾಘ್ರ ಚಾಮುಂಡಿ, ಬಂಟ, ಜಾಲ, ಬೈಕಡ್ತಿ, ಬೊಬ್ಬರ್ಯ, ಮಲೆಸಾವಿರ ಮತ್ತು ಕೊರಗಜ್ಜ ಕೋಲ ನಡೆಯಲಿದೆ.