ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ.2 ರಿಂದ ಮೇ.8 ರ ವರೆಗೆ ನಡೆಯಲಿದೆ. 1-05-2024 ರಂದು ಮಹಾಗಣಪತಿ ದೇವರಿಗೆ 500 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಅನ್ನಸಂತರ್ಪಣೆ ನಡೆಯಲಿದೆ. 2-5-2024 ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಹಸ್ರಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಅನ್ನಸಂತರ್ಪಣೆ,ಸಂಜೆ 5.30 ರಿಂದ ಮಹಾಪೂಜೆ ಉತ್ಸವ ಬಲಿ, ರಾತ್ರಿ 8.30ರಿಂದ ಏಕಪವಿತ್ರ ಶ್ರೀ ನಾಗಬ್ರಹ್ಮ ಮಂಡಲೋತ್ಸವ ನಡೆಯಲಿದೆ. 6-5-2024 ಧ್ವಜಾರೋಹಣ ಅನ್ನಸಂತರ್ಪಣೆ, 8-5-2024 ಶ್ರೀ ಮನ್ಮಹಾರಥೋತ್ಸವ ಅನ್ನಸಂತರ್ಪಣೆ ಉತ್ಸವ ಬಲಿ, 9-5-2024 ಸಂಜೆ 6 ರಿಂದ 6:12 ತನಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವೈಭವದ ನೇಮೋತ್ಸವ ನಡೆಯಲಿದೆ.