ಧರ್ಮ ದೈವ ಪಡ್ಡೆಯಿ ಜುಮಾದಿ ಮತ್ತು ಪರಿವಾರ ದೈವಗಳ ದೈವಸ್ಥಾನ ಕೊಳ್ತಿಗೆಯಲ್ಲಿ ಮೇ 22 ನೇ ಬುಧವಾರದಿಂದ ಮೇ 24 ಶುಕ್ರವಾರದ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ 22 ರಂದು ಬೆಳಿಗ್ಗೆ ಕಲಶ ಶುದ್ಧ ಮತ್ತು ಗಣ ಹೋಮ, ಮಧ್ಯಾಹ್ನ 12 ರಿಂದ ಅಸ್ರಯ , ರಾತ್ರಿ 7 ರಿಂದ ಗುರುಕಾರ್ಣಿಕರಿಗೆ ಬಡಿಸುವುದು, ನಂತರ ದೈವಗಳ ಭಂಡಾರ ಇಳಿಸುವುದು, ಎಣ್ಣೆ ಬೂಳ್ಯ ನೀಡುವುದು, 9 ರಿಂದ ಗೊಂದೊಳು ಪೂಜೆ, ನಲಿಕೆ, ನಂತರ ಗಣಗಳಿಗೆ ಬಡಿಸುವುದು ನಡೆಯಲಿದೆ. ಮೇ 23 ರಂದು ಬೆಳಿಗ್ಗೆ ಗಂಟೆ 7 ರಿಂದ ಪುದ ನೇಮ, ಕಲ್ಲಾಲ್ದ ಗುಳಿಗ ನೇಮ, 9 ರಿಂದ ಧರ್ಮ ದೈವ ಪಡ್ಡೆಯಿ ಜುಮಾದಿ ನೇಮ, ನಂತರ 12.30 ರಿಂದ ಸಿರಿಮುಡಿ ಗಂಧ ಬೂಳ್ಯ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಕುಪ್ಪೆ ಪಂಜುರ್ಲಿ ನೇಮ , ಸಂಜೆ 6 ರಿಂದ ಕಲ್ಕುಡ ಕಲ್ಲುರ್ಟಿ ನೇಮ, ಒತ್ತೆ ಕಲ್ಲುರ್ಟಿ ನೇಮ, ನಂತರ 8 ರಿಂದ ಅನ್ನಸಂತರ್ಪಣೆ , 9.30 ರಿಂದ ಕೂಲೆಮಾಣಿ, ಸತ್ಯಜಾವದೆ, ನಂತರ ವರ್ಣರ ಪಂಜುರ್ಲಿ ನೇಮ ನಡೆಯಲಿದೆ. ಮೇ 24 ರಂದು ಬೆಳಿಗ್ಗೆ 7 ರಿಂದ ಮೂಕಾಂಬಿಕಾ ಗುಳಿಗ ನೇಮ, 9 ರಿಂದ ಅಂಗಾರ ನೇಮ ನಡೆಯಲಿದೆ.