Monday, January 20, 2025
Homeಧಾರ್ಮಿಕಮೇ.3-6:ಅಂಬ್ಲಮೊಗರು,ಪಡ್ಯಾರ ಮನೆಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ

ಮೇ.3-6:ಅಂಬ್ಲಮೊಗರು,ಪಡ್ಯಾರ ಮನೆಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವ

ಶ್ರೀ ನಾಗಬನ ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಧರ್ಮ ಚಾವಡಿಯ ಪ್ರವೇಶೋತ್ಸವ ಮತ್ತು ಜುಮಾದಿ ಬಂಟ, ಮೂಲ ಮೈಸಂದಾಯ, ಅಣ್ಣಪ್ಪ ಪಂಜುರ್ಲಿ ದೈವಗಳ ಪ್ರತಿಷ್ಠೆ ಹಾಗೂ ಕಲ್ಲುರ್ಟಿ ಪಂಜುರ್ಲಿ, ವರ್ಣಾರ ಪಂಜುರ್ಲಿ, ರಾಹು ಗುಳಿಗ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಪಡ್ಯಾರ ಮನೆಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಬೋಲ್ಮಾರಗುತ್ತು ಶಶಿಧರ ಭಟ್ರ ನೇತೃತ್ವದಲ್ಲಿ ಮೇ 3 ರಿಂದ 6 ರವರೆಗೆ ನಡೆಯಲಿದೆ.

ಬೆಳಿಗ್ಗೆ ಗಂಟೆ 9 ರಿಂದ ಋತ್ವಿಜರ ಆಗಮನ ಮತ್ತು ದೇವತಾ ಪ್ರಾರ್ಥನೆ ದೀಪ ಪ್ರಜ್ವಲನೆ ನಂತರ ಗಣಹೋಮ, ತೋರಣ ಮುಹೂರ್ತ, ನವಗ್ರಹ ಶಾಂತಿ ಹೋಮ, ಪ್ರಸನ್ನ ಪೂಜೆ, ಪೂರ್ಣಾಹುತಿ ನಂತರ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ತಂಬಿಲ ಸೇವೆ ನಾಗ ದೇವರಿಗೆ ಕಲಾಶಾಭಿಷೇಕ ಪ್ರಸನ್ನ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 3 ರಿಂದ ಹಸಿರು ಹೊರಕಾಣಿಕೆ ಸಮರ್ಪಣೆ. 6 ಕ್ಕೆ ನಾಗ ತನುತರ್ಪಣ ಸೇವೆ, ಪ್ರಸಾದ ವಿತರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಿನಾಂಕ 4.5.2024 ಬೆಳಿಗ್ಗೆ 8 ರಿಂದ ಆದ್ಯ ಗಣಯಾಗ, ಚಂಡಿಕಾ ಹೋಮ, ಪ್ರಸಾದ ವಿತರಣೆ ಭಜನಾ ಕಾರ್ಯಕ್ರಮ ನಡೆಯುತ್ತದೆ. ಮಧ್ಯಾಹ್ನ 1 ಕ್ಕೆ ಯಕ್ಷಗಾನ ತಾಳ ಮದ್ದಲೆ (ಪ್ರಸಂಗ :ಯಾಗ ಸಂಕಲ್ಪ – ಮಾಗದ ವಧೆ) ಸಂಜೆ 4 ಕ್ಕೆ ಧಾರ್ಮಿಕ ಸಭೆ ನಡೆಯುತ್ತದೆ.ಸಂಜೆ 7 ಕ್ಕೆ ಭಕ್ತಿ ಭಾವ ಕುಸುಮಾಂಜಲಿ ನಡೆಯುತ್ತದೆ.

ದಿನಾಂಕ 5.5.2024 ಬೆಳಿಗ್ಗೆ 7.30 ರಿಂದ ಬ್ರಹ್ಮಕಶಾಧಿವಾಸ ಹೋಮಗಳು ,ಪ್ರತಿಷ್ಠಾ ಹೋಮ, ಪ್ರಧಾನ ಹೋಮಗಳು ನಡೆಯುತ್ತದೆ. ಬೆಳಿಗ್ಗೆ 10.10 ರಿಂದ ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ , ಜುಮಾದಿ ಅಣ್ಣಪ್ಪ ಪಂಜುರ್ಲಿ ದರ್ಶನ ಸೇವೆ, ಕಲ್ಲುರ್ಟಿ ಪಂಜುರ್ಲಿ ದರ್ಶನ ಸೇವೆ,ಮಹಾ ಅನ್ನಸಂತರ್ಪಣೆ, ನಡೆಯುತ್ತದೆ. ಸಂಜೆ 4 ಕ್ಕೆ ಧಾರ್ಮಿಕ ಸಭೆ ರಾತ್ರಿ 9 ಕ್ಕೆ ಮೈಸಂದಾಯ ನೇಮ ನಂತರ ಜುಮಾದಿ ಬಂಟ ಗಗ್ಗರ ಸೇವೆ ನೇಮೋತ್ಸವ ,ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ನಂತರ ಪ್ರಸಾದ ವಿತರಣೆ.

ದಿನಾಂಕ 6.5.2024 ಸಂಜೆ 5 ರಿಂದ ವರ್ಣಾರ ಪಂಜುರ್ಲಿ ಕೋಲ ಬಲಿ ಸೇವೆ , ರಾಹು ಗುಳಿಗೆ ದೈವದ ಕೋಲ ಬಲಿ ಸೇವೆ ಪ್ರಸಾದ ವಿತರಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular