ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಲ್ಲಿ ಶಾರದಾ ಕಲಾ ಸಾಂಸ್ಕೃತಿಕ ಸಂಸ್ಥೆ (ರಿ.), ದಾವಣಗೆರೆ ಇವರ ಆಶ್ರಯದಲ್ಲಿ ಗೀತ ಗಾಯನ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮೇ.05ರಂದು ಗೀತಾ ಮಂದಿರ, ಪಿ. ಬಿ.ರಸ್ತೆ, ಗಾಂಧಿ ವೃತ್ತ ಹತ್ತಿರ,ದಾವಣಗೆರೆ ಯಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉಪಾಸನ ಮೋಹನ್ (ಖ್ಯಾತ ಸಂಗೀತ ನಿರ್ದೇಶಕ,ಗಾಯಕ, ಬೆಂಗಳೂರು)ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಿ ವಾಮದೇವಪ್ಪ ,ಶ್ರೀ ವಿದ್ವಾನ್ ಮಾಲತೇಶ ಕುಲಕರ್ಣಿ,ಶ್ರೀಮತಿ ನೀಲಾಂಬಿಕೆ, ಶ್ರೀಮತಿ ವಿದುಷಿ ವೀಣಾ ಸದಾನಂದ ಹೆಗಡೆ. ಆರ್.ಹೆಚ್. ಭಾಗವಹಿಸಲಿದ್ದಾರೆ.