ಮುಲ್ಕಿ: ರಾಮಕೃಷ್ಣ ಪೂಂಜ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿ ಭಾಸ್ಕರ್ ಪೂಂಜಾ ಸಹಕಾರದೊಂದಿಗೆ
ಅಶಕ್ತರಿಗೆ ವೈದ್ಯಕೀಯ ನೆರವು ನೀಡುವ ಕಾರ್ಯಕ್ರಮ ಮುಲ್ಕಿಯ ಕಾರ್ನಾಡ್ ಪೂಂಜಾ ವಿಲ್ಲಾದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಿಟ್ಟೆ ಯುನಿವರ್ಸಿಟಿಯ ಪ್ರೊ ಚಾನ್ಸಿಲರ್ ಡಾ. ಶಾಂತರಾಮ ಶೆಟ್ಟಿ ಮಾತನಾಡಿ ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅಸಹಾಯಕರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿದ್ದು ಫಲಾನುಭವಿಗಳ ಆಶೀರ್ವಾದವೇ ಶ್ರೀರಕ್ಷೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಂಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದ್ಯಮಿ ಅರವಿಂದ ಪೂಂಜಾ ವಹಿಸಿ ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ನಿರಂತರವಾಗಿ ನಡೆಯಲಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಸಂತಿ ಶಾಂತರಾಮ್ ಶೆಟ್ಟಿ, ಡಾ. ಲತೀಕಾ ಶೆಟ್ಟಿ, ಪೂಂಜಾ ಚಾರಿಟೇಬಲ್ ಟ್ರಸ್ಟಿಗಳಾದ ಗಳಾದ ಅಶ್ವಿನಿ ಪೂಂಜ, ಆದಿತ್ಯ ಪೂಂಜಾ, ಅಪೂರ್ವ ಪೂಂಜಾ ಹಾಗೂ ಪೂಂಜಾ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ವೈ ಎನ್. ಸಾಲ್ಯಾನ್ ನಿರೂಪಿಸಿದರು.
ಬಳಿಕ ಸುಮಾರು 10 ಲಕ್ಷ 25 ಸಾವಿರ ರೂ ವೆಚ್ಚದಲ್ಲಿ160 ಮಂದಿ ಅಶಕ್ತರಿಗೆ ವೈದ್ಯಕೀಯ ನೆರವು ನೀಡುವ ಕಾರ್ಯಕ್ರಮ ನಡೆಯಿತು.