ಬೆಳ್ಳಾಯರು 1ನೇ ವಾರ್ಡಿನ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ಇಲ್ಲಿಯ ಶಾಲಾ ದುರಸ್ತಿಗಾಗಿ ಶಾಸಕರಾದ ಉಮನಾಥ್ ಕೋಟ್ಯಾನ್ ಇವರ ಶಿಫಾರಸಿನ ಮೇರೆಗೆ ಅನುದಾನ ಮಂಜೂರಾದ ಬಗ್ಗೆ, ಶಾಲಾ ವಾರ್ಷಿಕೋತ್ಸವದ ಬಗ್ಗೆ, ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಸದಸ್ಯರಾದ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಿಕಾ, ಮುಖ್ಯೋಪಾಧ್ಯಾಯರಾದ ಶಶಿಕಲಾ ,ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.