ಭಾರತವನ್ನು ಕೊರೊನಾ ಸಂಕಷ್ಟ ಬಾಧಿಸಿದ್ದರೂ ಈ ಕಳೆದ ಹತ್ತು ವರ್ಷಗಳಲ್ಲಿ ಜಗತ್ತಿನಲ್ಲಿ 5ನೇ ಸಬಲ ರಾಷ್ಟವನ್ನಾಗಿಸಿದ ಪ್ರಧಾನಿ ಮೋದಿಯವರು ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ಬಲವನ್ನು 186 ರಿಂದ 282 ಮತ್ತೆ 330 ಸ್ಥಾನಬಲಕ್ಕೇರಿಸಿದ್ದು ಈ ಬಾರಿ ನಾಲ್ಕುನೂರರ ಗಡಿದಾಟಿಸಿ ಬಿಡುವ ಸಂಕಲ್ಪ ತೊಟ್ಟಿದ್ದಾರೆ. ನಾವೆಲ್ಲರೂ ಇದನ್ನು ಸಾಕಾರಗೊಳಿಸಲು ಪಣತೊಡಬೇಕಾಗಿದೆ ಎಂದು ದ.ಕ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಲಾದ ಬಿಜೆಪಿ ಮೂಡುಬಿದಿರೆ ನಗರ, ಪುತ್ತಿಗೆ ಮತ್ತು ಶಿರ್ತಾಡಿ ಮಹಾಶಕ್ತಿಕೇಂದ್ರಗಳ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಚುನಾವಣಾ ಸಂಚಾಲಕ ಈಶ್ವರ ಕಟೀಲು, ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಜೈನ್, ಚುನಾವಣ ಪ್ರಭಾರಿ ಚಂದ್ರಶೇಖರ ಬಪ್ಪಳಿಗೆ, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗವರ್ಮ ಜೈನ್, ಸೋಮನಾಥ ಕೋಟ್ಯಾನ್, ಲಕ್ಷ್ಮಣ ಪೂಜಾರಿ, ಮಂಡಲ ಪ್ರ. ಕಾರ್ಯದರ್ಶಿ ರಂಜಿತ್ ಪೂಜಾರಿ ಮಂಡಲ ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಹರಿಪ್ರಸಾದ್, ಜಗನ್ನಾಥ, , ಪ್ರಸಾದ್ ಕುಮಾರ, ಬೆಳುವಾಯಿ ಭಾಸ್ಕರ ಆಚಾರ್ಯ, ಜೋಯ್ಲಸ್ ಡಿಸೋಜ, ಭುವನಾಭಿರಾಮ ಉಡುಪ, ಮೇಘನಾದ ಶೆಟ್ಟಿ, ಕೃಷ್ಣರಾಜ ಹೆಗ್ಡೆ, ದಯಾನಂದ ಪೈ, ಸುಕೇಶ್ ಶೆಟ್ಟಿ ಶಿರ್ತಾಡಿ ಮೊದಲಾದವರಿದ್ದರು.
ಗಣೇಶ್ ಬಿ. ಅಳಿಯೂರು ನಿರೂಪಿಸಿದರು. ಬ್ರಿಜೇಶ್ ಚೌಟ ಅವರು ಮೂಡುಬಿದಿರೆ ಜೈನಮಠ, ಸ್ವರಾಜ್ಯ ಮೈದಾನದ ಮಾರಿಗುಡಿಗಳು, ಪೇಟೆಯ ಶ್ರೀ ಹನುಮಂತ, ಶ್ರೀ ಗುರುಮಠ ಕಾಳಿಕಾಂಬಾ, ಕೊಡ್ಯಡ್ಕ ಅನ್ನಪೂರ್ಣೇಶ್ವರೀ, ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಬಿಂಬದ ದರ್ಶನ ಪಡೆದು, ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮೂಡುಬಿದಿರೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ಶಾಸಕ ಉಮಾನಾಥ ಎ.ಕೋಟ್ಯಾನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮತ್ತಿತರರಿದ್ದರು.