ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆ

0
35

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಇದರ ಪದಾಧಿಕಾರಿಗಳ ಸಭೆಯು ಆಗಸ್ಟ್ ಏಳರಂದು ಕಾರ್ಕಳದ ಹೋಟೆಲ್ ಪ್ರಕಾಶ್ ದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಸಾಪ ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಿ ಮಾತಾಡುತ್ತಾ ಕಾರ್ಕಳ ತಾಲೂಕಿನ ಜನತೆಯ ಸಾಹಿತ್ಯ ಆಸಕ್ತಿ ಹಾಗೂ ಕಾರ್ಯಕ್ರಮಗಳಿಗೆ ನೀಡುವ ಸಹಕಾರ ನಮಗೆ ತುಂಬ ಖುಷಿ ಕೊಟ್ಟಿದೆ . ಇದುವರೆಗೆ ನಡೆದ ಎಲ್ಲಾ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ.

ನಾಡು ನುಡಿ ಸೇವೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಸಕ್ರಿರಾಗಿ ತೊಡಗಿ ಸಿಕೊಳ್ಳುತ್ತಿದ್ದಾರೆ. ಮುಂದೆ ಕಸಾಪದ ಅಜೀವಸದಸ್ಯರ ತಾಲೂಕು ಸಮಾವೇಶ ನಡೆಸುವ ಬಗ್ಗೆ , ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಸಾಹಿತ್ಯ ಕಮ್ಮಟ ಹಾಗೂ ಕಾವ್ಯರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಅಂತೆಯೇ ಮುಖ್ಯವಾಗಿ ನವೆಂಬರ್ ತಿಂಗಳಿನಲ್ಲಿ 24 ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಾರ್ಕಳದ ಸಾಣೂರಿನ ರಾಜೇಶ್ವರಿ ನೇಷನಲ್ ಸ್ಕೂಲ್ ಇಲ್ಲಿ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಾಗೆಯೇ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಜಿಲ್ಲಾ ಸಮಿತಿಯ ಅನುಮತಿ ಪಡೆದು ಮುಂದೆ ಆಯ್ಕೆ ಮಾಡಲಾಗುವುದು ಎಂದು‌ ತಿಳಿಸಿದರು. ಸಭೆಯಲ್ಲಿ ಉದ್ಯಮಿ ಡಾ ರವೀಂದ್ರ ಶೆಟ್ಟಿ ಬಜಗೋಳಿ ಕಸಾಪ ಜಿಲ್ಲಾ ಪ್ರತಿನಿಧಿ ಎಸ್ ನಿತ್ಯಾನಂದ ಪೈ ಕಾರ್ಯಕ್ರಮ ಸಂಘಟಕರಾದ ರಘುವೀರ್ ಶೆಣೈ ಮುಂಡ್ಕೂರು ಪದಾಧಿಕಾರಿಗಳಾದ ಸುಲೋಚನಾ ಬಿ ವಿ ಶೈಲಜಾ ಹೆಗ್ಡೆ ಡಾ ಸುಮತಿ ಧರಣೇಂದ್ರ ಕುಮಾರ ಆಶೀಶ್ ಶೆಟ್ಟಿ ದೇವುದಾಸ್ ನಾಯಕ್ ರಮೇಶ್ ಪ್ರಭು ತಿಪ್ಪೇಸ್ವಾಮಿ ಚಳ್ಳಕೆರೆ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ಧನ್ಯವಾದವಿತ್ತರು.