Friday, March 21, 2025
Homeಸುರತ್ಕಲ್ಶಾಲಾ ಶತಮಾನೋತ್ಸವ ಆಚರಿಸಲು ಸಭೆ

ಶಾಲಾ ಶತಮಾನೋತ್ಸವ ಆಚರಿಸಲು ಸಭೆ

ಸುರತ್ಕಲ್ : ಕರ್ನಾಟಕ ಪಬ್ಲಿಕ್ ಸ್ಕೂಲ್, ಮುತ್ತೂರು. ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಳವೂರು ಪ್ರಾಥಮಿಕ ವಿಭಾಗ,_ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳವೂರು- ಮುತ್ತೂರು, ನಮ್ಮ ಶಾಲೆಯು 1925 ನೇ ಇಸವಿಯಲ್ಲಿ ಪ್ರಾರಂಭಗೊಂಡು ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಉನ್ನತೀ ಕರಣಗೊಂಡು ಶತಮಾನದ ಹೊಸ್ತಿಲಲ್ಲಿದೆ.

ಈ ಬಗ್ಗೆ ಶಾಲಾ ಶತಮಾನೋತ್ಸವವನ್ನು ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಊರಿನ ವಿದ್ಯಾಭಿಮಾನಿಗಳು, ಶಾಲಾ ಅಭಿಮಾನಿಗಳು, ಶಿಕ್ಷಣ ಸಕ್ತರು, ಹಳೆ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಶಾಲಾ ಎಸ್ಡಿಎಂಸಿ ಸದಸ್ಯರು ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.

ಸಭೆಯಲ್ಲಿ ಶಾಲೆಯ ಶತಮಾನೋತ್ಸವವನ್ನು ಆಚರಿಸುವುದರ ಬಗ್ಗೆ ವಿಸ್ತೃತವಾಗಿ ಚರ್ಚೆಯನ್ನು ನಡೆಸಲಾಯಿತು. ಶಾಲಾ ಶತಮಾನೋತ್ಸವ ಆಚರಣೆಯ ಸಮಿತಿಯನ್ನು ರಚಿಸಲಾಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಡಾ.ವೈ ಭರತ್ ಶೆಟ್ಟಿ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಬ್ರಿಜೇಶ್ ಚೌಟ ರವರುಗೌರವಾಧ್ಯಕ್ಷತೆಯಲ್ಲಿ, ಶಾಲಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನೋಣಾಲು ಹಾಗೂ ಮುತ್ತೂರು ಮನೆತನದ ಕೃಷ್ಣರಾಜ ಮಾರ್ಲ ಮುತ್ತೂರು ಮತ್ತು ಯತಿರಾಜ ಭಂಡಾರಿ ನೋಣಾಲು ಇವರ ಗೌರವ ಮಾರ್ಗದರ್ಶನ ದಲ್ಲಿ ಹಾಗೂ ಮುತ್ತೂರು ಗ್ರಾಮ ಪಂಚಾಯಿತಿನ ಮಾನ್ಯಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರ ಗೌರವ ಉಪಾಧ್ಯಕ್ಷತೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿಯು ಕಾರ್ಯನಿರ್ವಹಿಸಲಿದೆ.

ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ನಿತ್ಯಾನಂದ.ಕೆ, ಕಾರ್ಯಾಧ್ಯಕ್ಷರಾಗಿ ಶಿವಾನಂದ ಕುಲಾಲ್, ಹಿರಿಯ ಉಪಾಧ್ಯಕ್ಷರಾಗಿ ಹರಿಯಪ್ಪ, ಪ್ರತಿಭಾ ಹೆಗಡೆ, ಜಯನಂದ ನಾಯಕ ಲತೀಫ್ ಮತ್ತು ಗಿರೀಶ ಆಳ್ವ ಇವರನ್ನು ಆಯ್ಕೆ ಮಾಡಲಾಯಿತು.ಈ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರಘುರಾಮ್, ಜೊತೆ ಕಾರ್ಯದರ್ಶಿಯಾಗಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ಪ್ರಮೀಳಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ರೋಹಿಣಿ ಮತ್ತು ಶಂಕರ್ ಶೆಟ್ಟಿ ಇವರನ್ನು ನೇಮಿಸಲಾಯಿತು. ಸಮಿತಿಯ ಕೋಶಾಧಿಕಾರಿಯಾಗಿ ಮೊಹಮ್ಮದ್ ಶಾಲಿ, ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಪವನ್ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಉಪಾಧ್ಯಕ್ಷರಾಗಿ ರವಿ ಕುಲಾಲ್ , ಗೋಪಾಲ್, ಜಗದೀಶ್, ಸತೀಶ್, ಭಾರತಿ, ಹಿದಾಯತುಲ್ಲ, ಗಣೇಶ್ ಆಳ್ವ, ಮಮತಾ, ಸದಾನಂದ ಶೆಟ್ಟಿ, ನೌಶಾದ್, ಅಬ್ದುಲ್ ಜಬ್ಬರ್, ಮತ್ತು ಸತೀಶ್ ಆಳ್ವ ಗುಂಡಾಲ ಇವರುಗಳನ್ನು ಆಯ್ಕೆ ಮಾಡಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳಲ್ಲಿರುವಂತಹ ಅಧಿಕಾರಿಗಳು ಗೌರವ ಸಲಹೆಗಾರರಾಗಿ ಸಮಿತಿಗೆ ಸಲಹೆ ಸಹಕಾರವನ್ನು ನೀಡುವುದರೊಂದಿಗೆ, ಅಣ್ಣಿ ಶೆಟ್ಟಿ, ರಶ್ಮಿತೆ ಬಾರ್ಲ, ಪೃಥ್ವಿ ಆಳ್ವ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಶತಮಾನಸ ಸಮಿತಿಯ ಗೌರವ ಸಲಹೆಗಾರರಾಗಿರುತ್ತಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್, ಮುತ್ತೂರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಕಾರ್ಯಾಧ್ಯಕ್ಷರು ಮತ್ತು ಸರ್ವ ಸದಸ್ಯರು ನಮ್ಮ ಸಮಿತಿಯಲ್ಲಿ ಪ್ರತಿನಿಧಿಗಳಾಗಿದ್ದು, ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದದವರು, ಅಕ್ಷರ ದಾಸೋಹ ಸಿಬ್ಬಂದಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಅಂಗನವಾಡಿ ಕಾರ್ಯಕರ್ತೆ ಯವರನ್ನು ಶಾಲಾ ಶತಮಾನೋತ್ಸವ ಸಮಿತಿಯು ಒಳಗೊಂಡಿರುತ್ತದೆ. ಸುಮಾರು ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾ ದಾನವನ್ನು ಮಾಡಿ ತಮ್ಮ ಬದುಕು ಕಟ್ಟಿಕೊಂಡು ಜೀವನ ರೂಪಿಸಲು ಕಾರಣಿ ಕರ್ತವಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಳವೂರು ಪ್ರಾಥಮಿಕ ವಿಭಾಗ ಇದರ ಶತಮಾನ ಶತಮಾನೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸರ್ವರನ್ನು ಒಳಗೊಂಡ ವಿಸ್ತೃತವಾದ ಶತಮಾನೋತ್ಸವ ಸಮಿತಿಯನ್ನು ರಚಿಸಲಾಯಿತು.

ಇದೇ ಸಭೆಯಲ್ಲಿ ನೆರೆದಿರುವವರ ಸರ್ವಾನುಮತದ ಅಭಿಪ್ರಾಯದಂತೆ, ಮತ್ತು ಸರಕಾರದಆಶಯದಂತೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಪರಿಕಲ್ಪನೆಯಂತೆ ಎಲ್ ಕೆಜಿ ಇಂದ ಪದವಿಪೂರ್ವ ಶಿಕ್ಷಣವು ಒಂದೇ ಸೂರಿ ನಡಿಗೆ ಬರುವಂತೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುತ್ತೂರು ಇದರ ಆವರಣದಲ್ಲಿ ಪ್ರಾಥಮಿಕ ವಿಭಾಗವನ್ನು ಪ್ರಾರಂಭಿಸುದೆಂದು ಚರ್ಚಿಸಿ ತೀರ್ಮಾನಿಸಲಾಯಿತು. ಸರಕಾರದಿಂದ ಮತ್ತು ದಾನಿಗಳ ನೆರವಿನಿಂದ ಕಟ್ಟಡವನ್ನು ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶತಮಾನೋತ್ಸವ ಸಂಭ್ರಮದ ಸ್ಮಾರಕ ಕಟ್ಟಡವನ್ನು ಲೋಕಾರ್ಪಣೆ ಗೊಳಿಸುವ ಮೂಲಕ ಈ ಶತಮಾನೋತ್ಸವವನ್ನು ಒಂದು ಅರ್ಥಪೂರ್ಣ ಗೊಳಿಸುವ ಸಂಕಲ್ಪ ಮಾಡಲಾಯಿತು.

ಬಳಿಕ ಸಭೆಯನ್ನು ಉದ್ದೇಶಿಸಿ ಶತಮಾನೋತ್ಸವ ಸಮಿತಿಯ ನೂತನ ಅಧ್ಯಕ್ಷರಾದ ನಿತ್ಯಾನಂದ.ಕೆ. ಇವರು ಮಾತನಾಡಿ ಸರ್ವರ ಸಹಕಾರವನ್ನು ಕೋರಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪ್ರಮೀಳಾ ರವರು ನೆರೆದಿರುವಂತ ಎಲ್ಲರಿಗೂ ಧನ್ಯವಾದಗಳು ಸಮರ್ಪಿಸುವುದರೊಂದಿಗೆ ಈ ಸಭೆಯು ಮುಕ್ತಾಯವಾಯಿತು.

RELATED ARTICLES
- Advertisment -
Google search engine

Most Popular