ನವದೆಹಲಿ: ಮೈಕ್ರೋಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದುದರಿಂದ ವಿಶ್ವದ ಹಲವು ವಿಮಾನಗಳ ಸೇವೆ ಸಹಿತ ಹಲವಾರು ವ್ಯವಹಾರಗಳಲ್ಲಿ ವ್ಯತ್ಯಯ ಉಂಟಾಗಿದೆ. ದೆಹಲಿ, ನ್ಯೂಯಾರ್ಕ್ ಸೇರಿ ಹಲವೆಡೆ ವಿಮಾನ ಸಂಚಾರ ಸ್ಥಗಿತ ಮಾಡಲಾಗಿದೆ.
ಮೈಕ್ರೊಸಾಫ್ಟ್ ಸರ್ವರ್‌ನಲ್ಲಿ ವ್ಯತ್ಯಯವಾದ ಪರಿಣಾಮ ಜಾಗತಿಕ ಮಟ್ಟದಲ್ಲಿ ಸಾಕಷ್ಟು ವ್ಯವಹಾರಗಳಿಗೆ ಅಡ್ಡಿಯಾಗಿದೆ. ವಿಮಾನಯಾನ, ಬ್ಯಾಂಕ್ ವ್ಯವಹಾರ, ಸೂಪರ್ ಮಾರ್ಕೆಟ್ ವ್ಯವಹಾರ ಸೇರಿದಂತೆ ಹಲವು ವ್ಯವಹಾರಗಳಲ್ಲಿ ವ್ಯತ್ಯಯವಾಗಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಸೇವೆ ಕೂಡ ಸ್ಥಗಿತವಾಗಿದೆ.
ಎಸ್‌ಎಂಎಸ್ ಮೂಲಕ ಪ್ರಯಾಣಿಕರಿಗೆ ಏರ್‌ಲೈನ್ಸ್ ಕಂಪೆನಿಗಳು ಮಾಹಿತಿ ನೀಡುತ್ತಿವೆ. ದೆಹಲಿ ಏರ್ಪೋರ್ಟ್‌ನಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದೆ. ವಿಸ್ತಾರ, ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಕೈಯಲ್ಲಿ ಬರೆದ ಬೋರ್ಡಿಂಗ್ ಪಾಸ್‌ಗಳನ್ನು ನೀಡುತ್ತಿದ್ದಾರೆ. ಜಗತ್ತಿನ ವಿವಿಧ ದೇಶಗಳ ಬ್ಯುಸಿನೆಸ್, ಏರ್‌ಲೈನ್ಸ್, ಬ್ಯಾಂಕ್, ಸ್ಟಾಕ್ ಎಕ್ಸ್‌ಚೇಂಜ್ ಸಹಿತ ಹಲವು ಸೇವೆಗಳಲ್ಲಿ ಭಾರೀ ವ್ಯತ್ಯವಾಗಿದೆ.