ಮಂಗಳೂರು: ರೋಹನ್ ಕಾರ್ಪೊರೇಷನ್ ಅರ್ಪಿಸುವ,ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಯಶಸಗವಿಯಾಗಿ 50 ದಿನಗಳನ್ನು ಪೂರೈಸಿದೆ.
ಎಲ್ಲಾ ಕೇಂದ್ರಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ ಕರಾವಳಿ ಜಿಲ್ಲೆಯಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಹುತೇಕ ಎಲ್ಲಾ ಟಾಕೀಸ್ ಗಳಲ್ಲಿ ಅಭೂತಪೂರ್ವ ಸ್ಪಂದನೆ ಸಿನಿಮಾಗೆ ಸಿಕ್ಕಿದೆ. ಈಗಾಗಲೇ ಗಲ್ಫ್ ದೇಶಗಳಲ್ಲಿ ಪ್ರೀಮಿಯರ್ ಶೋ ನಡೆದಿದ್ದು ಮತ್ತೆ ಮತ್ತೆ ಈ ಸಿನಿಮಾ ಬಿಡುಗಡೆಗೆ ಗಲ್ಪ್ ದೇಶಗಳಿಂದ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಮುಂಬೈ, ಪೂನಾ, ಮುಂಬೈ ಸಹಿತ ಬೇರೆ ಬೇರೆ ತಾಣಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕಾಗಿ ಸಿದ್ದತೆಯೂ ನಡೆದಿದೆ.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಮತ್ತೊಂದು ಕೊಡುಗೆ ಮಿಡ್ಲ್ ಕ್ಲಾಸ್ ಫ್ಯಾಮಿಲಿ. ನಿರ್ದೇಶಕ ರಾಹುಲ್ ಅಮೀನ್ ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ನಂತೆ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಲ್ಲೂ ಕಮಾಲ್ ಮಾಡಿದ್ದಾರೆ. ಬಸವಳಿದಿದ್ದ ತುಳು ಸಿನಿಮಾರಂಗಕ್ಕೆ ಬೂಸ್ಟ್ ತುಂಬಿದ್ದಾರೆ. ತುಳು ಸಿನಿಮಾರಂಗ ಮತ್ತೆ ಚೇತರಿಕೆ ಹಾದಿ ಹಿಡಿದಿದೆ.
ತುಳುವನಲ್ಲಿ ಬಿಗ್ ಬಜೆಟ್ ನ ಸಿನಿಮಾ ಇದು. ಎರಡು ಕೋಟಿ ರೂಪಾಯಿಗೂ ಮಿಕ್ಕಿದ ಖರ್ಚಿನಲ್ಲಿ ತಯಾರಾದ ಸಿನಿಮಾವನ್ನು ಮುಖ್ಯವಾಗಿ ಮಹಿಳೆಯರು, ಮಕ್ಕಳು ತುಂಬಾ ಮೆಚ್ಚಿ ಕೊಂಡಿದ್ದಾರೆ, ಇಷ್ಟ ಪಟ್ಟಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ರವಿ ರಾಮಕುಂಜ, ಪ್ರಸನ್ನ ಬೈಲೂರು ಸಂದೀಪ್ ಶೆಟ್ಟಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರೆ, ನವೀನ್ ಡಿ ಪಡೀಲ್ ಇಲ್ಲಿ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಅವರ ಪಾತ್ರಕ್ಕೆ ಪರಾಕಾಯ ಪ್ರವೇಶ ಮಾಡಿದ್ದಾರೆ. ವಿನೀತ್ ಕುಮಾರ್, ಸಮತಾ ಅಮೀನ್ ನಾಯಕ ನಾಯಕಿಯಾಗಿ ಗೆದ್ದಿದ್ದಾರೆ. ರಾಹುಲ್ ಅಮೀನ್ ರ ಖಳಪಾತ್ರ ಹೊಸ ಮ್ಯಾನರಿಸಂನಿಂದ ಕೂಡಿದೆ. ಕದ್ರಿ ನವನೀತ ಶೆಟ್ಟಿ, ಸಾಹಿಲ್ ರೈ, ರೂಪಾ ವರ್ಕಾಡಿ, ಚೈತ್ರಾ ಶೆಟ್ಟಿ ಶೋಭಾ ರೈ, ಮೈಮ್ ರಾಮ್ ದಾಸ್, ಚಿದಾನಂದ್ ಪಾತ್ರಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್’ನ ಬಿಗ್ ಸಿನಿಮಾಸ್, ಪಿವಿಆರ್,ಸಿನಿಪೊಲಿಸ್, ಭಾರತ್ ಸಿನಿಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರೆ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.