Saturday, February 15, 2025
Homeಉಡುಪಿʻಮಿಡ್ಲ್‌ ಕ್ಲಾಸ್‌ ಫ್ಯಾಮಿಲಿʼ ತುಳು ಸಿನೆಮಾದ ಹಾಡು ಬಿಡುಗಡೆ

ʻಮಿಡ್ಲ್‌ ಕ್ಲಾಸ್‌ ಫ್ಯಾಮಿಲಿʼ ತುಳು ಸಿನೆಮಾದ ಹಾಡು ಬಿಡುಗಡೆ

ಉಡುಪಿ: ವೈಭವ್‌ ಫ್ಲಿಕ್ಸ್‌ ಮತ್ತು ಮ್ಯಾಂಗೋ ಪಿಕಲ್‌ ಎಂಟರ್‌ಟೈನ್‌ಮೆಂಟ್‌ ಅರ್ಪಿಸುವ ಎಚ್‌ಪಿಆರ್‌ ಫಿಲಂಸ್‌ – ಹರಿಪ್ರಸಾದ್‌ ರೈ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ʻಮಿಡ್ಲ್‌ ಕ್ಲಾಸ್‌ ಫ್ಯಾಮಿಲಿʼ ತುಳು ಸಿನೆಮಾದ ಹಾಡು ಬಿಡುಗಡೆ ಸಮಾರಂಭ ಕಲ್ಪನಾ ಥಿಯೇಟರಿನಲ್ಲಿ ಜರುಗಿತು.
ಸಾಯಿರಾಧಾ ಡೆವಲಪರ್ಸ್‌ ಮಾಲಕ ಮನೋಹರ್‌ ಶೆಟ್ಟಿ ಚಿತ್ರದ ಪೋಸ್ಟರ್‌ ಬಿಡುಗಡೆಗೊಳಿಸಿದರು. ಶಾಸಕ ಯಶ್‌ಪಾಲ್‌ ಸುವರ್ಣ ಮಾತಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉದ್ಯಮಿ ಪ್ರಸಾದ್‌ ರಾಜ್‌ ಕಾಂಚನ್‌, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಂಗಭೂಮಿ ಕಲಾವಿದ ವಿಜಯಕುಮಾರ್‌ ಕೊಡಿಯಾಲಬೈಲು ಶುಭಕೋರಿದರು.
ಉದ್ಯಮಿ ರಮೇಶ್‌ ಕಾಂಚನ್‌, ಗೀತಾಂಜಲಿ ಸುವರ್ಣ, ಹರಿಪ್ರಸಾದ್‌ ರೈ, ದಿನೇಶ್‌ ಕಿಣಿ, ಲಯನ್ಸ್‌ ಜಿಲ್ಲಾ ಗವರ್ನರ್‌ ಮುಹಮ್ಮದ್‌ ಹನೀಫ್‌, ಗಿರೀಶ್‌ ರಾವ್‌, ನಿರ್ಮಾಪಕ ಆನಂದ ಕುಂಪಲ, ಸಹನಿರ್ಮಾಪಕ ಗಣೇಶ್‌ ಕೊಲ್ಯ, ಭರತ್‌ ಕುಮಾರ್‌, ನಿತಿನ್‌ ರಾಜ್‌ ಶೆಟ್ಟಿ, ಪವನ್‌ ಕುಮಾರ್‌, ಅಶೋಕ್‌ ಹೆಗ್ಡೆ, ಲಯನ್‌ ಕಿಶೋರ್‌ ಡಿ ಶೆಟ್ಟಿ, ಚಿತ್ತರಂಜನ್‌ ಬೋಳೂರು, ನಿತಿನ್‌ ಶೆಟ್ಟಿ, ವಿನೀತ್‌ ಕುಮಾರ್‌, ಭೋಜರಾಜ ವಾಮಂಜೂರು, ನಿರ್ದೇಶ ರಾಹುಲ್‌ ಅಮೀನ್‌, ಸಂದೀಪ್‌ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರದಲ್ಲಿ ವಿನೀತ್‌ ಕುಮಾರ್‌ ನಾಯಕ ನಟ, ಸಮತಾ ಅಮೀನ್‌ ನಾಯಕಿಯಾಗಿ, ನವೀನ್‌ ಡಿ.ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌, ಚೈತ್ರಾ ಶೆಟ್ಟಿ ಅಭಿನಯಿಸಿದ್ದಾರೆ. ಸೃಜನ್‌ ಕುಮಾರ್‌ ತೋನ್ಸೆ ಸಂಗೀತ ನೀಡಿದ್ದಾರೆ. ನವೀನ್‌ ಕುಮಾರ್‌ ಶೆಟ್ಟಿ ನೃತ್ಯ ಸಂಯೋಜಿಸಿದ್ದಾರೆ.

RELATED ARTICLES
- Advertisment -
Google search engine

Most Popular