Saturday, February 15, 2025
Homeಅಪರಾಧವಲಸೆ ಕಾರ್ಮಿಕನನ್ನು ಹತ್ಯೆ ಪ್ರಕರಣ: ಏಳು ಮಂದಿ ಬಂಧನ

ವಲಸೆ ಕಾರ್ಮಿಕನನ್ನು ಹತ್ಯೆ ಪ್ರಕರಣ: ಏಳು ಮಂದಿ ಬಂಧನ

ಗೋಮಾಂಸ ಸೇವಿಸಿದ್ದಾರೆಂಬ ಶಂಕೆಯ ಮೇಲೆ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಆರೋಪಿಗಳು, ಗೋರಕ್ಷಕರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಹತ್ಯೆಯಾದ ಸಬೀರ್ ಮಲಿಕ್ (22) ಆಗಸ್ಟ್ 27 ರಂದು ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಥಳಿಸಿ ಕೊಲ್ಲಲ್ಪಟ್ಟರು. ಅವರು ಚಿಂದಿ ಆಯುವ ಕೆಲಸ ಮಾಡಲು ರಾಜ್ಯಕ್ಕೆ ಬಂದಿದ್ದರು. ಹಂಸವಾಸ್ ಖುರ್ದ್ ಗ್ರಾಮದಲ್ಲಿ ಪತ್ನಿ ಮತ್ತು ಎರಡು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು.

ಅವರ ಸಾವಿಗೆ ಗಂಟೆಗಳ ಮೊದಲು, ಯುವಕರ ಗುಂಪೊಂದು ಗ್ರಾಮಕ್ಕೆ ಪೊಲೀಸರನ್ನು ಕರೆಸಿತ್ತು, ಅವರು ಅಲ್ಲಿನ ಗುಡಿಸಲುಗಳಲ್ಲಿ ಗೋಮಾಂಸವನ್ನು ಬೇಯಿಸಿ ಸೇವಿಸುತ್ತಿದ್ದಾರೆ ಎಂದು ಹೇಳಿದ್ದರು. ಮಾಂಸವನ್ನು ಪೊಲೀಸರು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದಾಗಲೂ ಆರೋಪಿಗಳು ಕಾನೂನನ್ನು ಕೈಗೆತ್ತಿಕೊಂಡು ಸಾಬೀರ್‌ನನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅದೇ ದಿನ, ಅವರನ್ನು ಪೊಲೀಸ್ ಠಾಣೆಗೆ ಕರೆಸಿ ನೀವು ಗೋಮಾಂಸ ಸೇವಿಸುತ್ತೀರಾ ಎಂದು ಕೇಳಲಾಯಿತು ಎಂದು ಸಬೀರ್ ಅವರ ಸಂಬಂಧಿಕರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಆರೋಪಿಗಳನ್ನು ಅಭಿಷೇಕ್, ಮೋಹಿತ್, ಕಮಲಜಿತ್, ಸಾಹಿಲ್ ಮತ್ತು ರವೀಂದರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಉಪ ಅಧೀಕ್ಷಕ ಧೀರಜ್ ಕುಮಾರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಮಾಹಿತಿಯಂತೆ “ಮಂಗಳವಾರ (ಆಗಸ್ಟ್ 27), ಹಂಸವಾಸ್ ಖುರ್ದ್ ಗ್ರಾಮದಲ್ಲಿ ಯುವಕರ ಗುಂಪು ಕೆಲವು ಚಿಂದಿ ಆಯುವವರನ್ನು ಹಿಡಿದು ಅವರು ಗೋಮಾಂಸ ಸೇವಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಬೀರ್ ಅದೇ ಗ್ರಾಮದಲ್ಲಿ ವಾಸವಾಗಿದ್ದ. ಪೊಲೀಸರನ್ನೂ ಸ್ಥಳಕ್ಕೆ ಕರೆಸಲಾಯಿತು ಮತ್ತು ಪರಿಶೀಲನೆ ನಡೆಸಿದಾಗ, ಅಲ್ಲಿ ಗುಡಿಸಲುಗಳಲ್ಲಿ ವಾಸಿಸುವ ಕೆಲವು ವ್ಯಕ್ತಿಗಳು ಮಾಂಸವನ್ನು ಬೇಯಿಸುತ್ತಿರುವುದು ಕಂಡುಬಂದಿದೆ. ಫೋರೆನ್ಸಿಕ್ ಮತ್ತು ಪಶುವೈದ್ಯಕೀಯ ತಜ್ಞರು ಸ್ಥಳವನ್ನು ಪರಿಶೀಲಿಸಿದರು ಮತ್ತು ಇದು ನಿಜವಾಗಿಯೂ ಗೋಮಾಂಸವೇ ಎಂದು ನಿರ್ಧರಿಸಲು ಮಾಂಸದ ಮಾದರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವರದಿಗಾಗಿ ಕಾಯಲಾಗಿತ್ತು. ಗಂಟೆಗಳ ನಂತರ, ಈ ಆರೋಪಿಗಳು ಸಬೀರ್ ಮಲಿಕ್ ಅವರನ್ನು ಹಿಡಿದು ನಿರ್ದಯವಾಗಿ ಹಲ್ಲೆ ನಡೆಸಿದರು. ತೀವ್ರ ಹಲ್ಲೆ ಅವರ ಸಾವಿಗೆ ಕಾರಣವಾಯಿತು. ಮರಣೋತ್ತರ ಪರೀಕ್ಷೆ ನಡೆಸಿ ಅವರ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಗುಡಿಸಲುಗಳಲ್ಲಿ ವಾಸಿಸುವ ಹೆಚ್ಚಿನ ಜನರು ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular