Monday, July 15, 2024
Homeರಾಷ್ಟ್ರೀಯಇಂಡೋ-ಪಾಕ್‌ ಗಡಿಯಲ್ಲಿ ಯೋಧರೊಂದಿಗೆ ಅತ್ಯದ್ಭುತ ಯೋಗ ಪ್ರದರ್ಶಿಸಿದ ಶ್ವಾನಗಳು!

ಇಂಡೋ-ಪಾಕ್‌ ಗಡಿಯಲ್ಲಿ ಯೋಧರೊಂದಿಗೆ ಅತ್ಯದ್ಭುತ ಯೋಗ ಪ್ರದರ್ಶಿಸಿದ ಶ್ವಾನಗಳು!

ಶ್ರೀನಗರ: ಇಂಡೋ-ಪಾಕ್‌ ಗಡಿ ನಿಯಂತ್ರಣ ರೇಖೆಯ ಬಳಿ ಸೈನಿಕರೊಂದಿಗೆ ಎರಡು ಶ್ವಾನಗಳು ಯೋಗಾಸನದಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಭದ್ರತಾ ಪಡೆ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋಗೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು ಯೋಧರು ಯೋಗ ಮಾಡುವಾಗ ಅವು ಕೂಡ ಮ್ಯಾಟ್‌ ಮೇಲೆ ಯೋಗ ಮಾಡಿವೆ. ಸಾಮಾನ್ಯವಾಗಿ ಗಸ್ತು, ಟ್ರಾಕಿಂಗ್‌, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಶ್ವಾನಗಳು ಇಂದು ಯೋಗ ನಿರ್ವಹಿಸಿರುವುದು ಅಚ್ಚರಿ ಮೂಡಿಸಿದೆ. ವಿಡಿಯೋದಲ್ಲಿ ಎರಡು ಲ್ಯಾಬ್ರಡಾರ್‌ ಶ್ವಾನಗಳು ಸೈನಿಕರ ಸಾಲಿನಲ್ಲಿ ತರಬೇತುದಾರರ ಸೂಚನೆಗಳನ್ನು ಅನುಸರಿಸಿವೆ. ಸೈನಿಕರು ಯೋಗ ಭಂಗಿಗಳನ್ನು ಬದಲಿಸಿದಂತೆ ಅವುಗಳು ಸಹ ಅನುಕರಿಸಿವೆ.

ಈ ವೀಡಿಯೊವನ್ನು ನೀವೂ ಎಕ್ಸ್‌ ಖಾತೆಯ ಲಿಂಕ್‌ನಲ್ಲಿ ವೀಕ್ಷಿಸಿ..

https://x.com/DDNewslive/status/1803956113227829601?ref_src=twsrc%5Etfw%7Ctwcamp%5Etweetembed%7Ctwterm%5E1803956113227829601%7Ctwgr%5E208e5dcc99b7da816d0f294af08c35f26fb0909e%7Ctwcon%5Es1_&ref_url=https%3A%2F%2Fpublictv.in%2Farmy-dogs-join-yoga-day-celebrations-at-indo-pak-border%2F

RELATED ARTICLES
- Advertisment -
Google search engine

Most Popular