Sunday, July 21, 2024
Homeಅಪಘಾತಚಾರ್ಮಾಡಿ | ಮಿನಿ ಬಸ್ಸು ಅಪಘಾತ;  17 ಮಂದಿಗೆ ಗಾಯ

ಚಾರ್ಮಾಡಿ | ಮಿನಿ ಬಸ್ಸು ಅಪಘಾತ;  17 ಮಂದಿಗೆ ಗಾಯ

ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿ ಬಳಿಯ ಚಿಬಿದ್ರೆ ಕಾಪು ಚಡಾವು ಎಂಬಲ್ಲಿ ಮಿನಿ ಬಸ್ಸೊಂದು ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 17 ಮಂದಿಗೆ ಗಾಯಗಳಾಗಿವೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ  ಮಿನಿ ಬಸ್ಸು ಡಿಕ್ಕಿಯಾಗಿದೆ. ಘಟನೆಯಲ್ಲಿ ಬೆಂಗಳೂರು ಮೂಲದ 45 ವರ್ಷದ ವೆಂಕಟಸ್ವಾಮಪ್ಪ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನುಳಿದಂತೆ 15 ವರ್ಷದ ಕೀರ್ತನಾ, 7 ವರ್ಷದ ತನಿಷ್ಕಾ, 21 ವರ್ಷದ ಯಶವಂತ, 37 ವರ್ಷದ ರೂಪಾ, 39 ವರ್ಷದ ಹಂಸಾ, 21 ವರ್ಷದ ತನುಶ್ರೀ, 13 ವರ್ಷದ ವಿಕಾಸ್, 23 ವರ್ಷದ ಅಖಿಲಾ, 47 ವರ್ಷದ ರತ್ನಮ್ಮ, 33 ವರ್ಷದ ಬಾಲಕೃಷ್ಣ, 62 ವರ್ಷದ ಯಲ್ಲಮ್ಮ, 33 ವರ್ಷದ ರೂಪಾ,  11 ವರ್ಷದ ಪ್ರೀತಂ, ಪಾವನಾ, ಮಂಜುಳಾ, ಬಿಂದುಶ್ರೀ, ಮಿಥುನ್ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬಸ್ಸು ಗುಡ್ಡ ಏರಿದ ಸ್ಥಳದಲ್ಲಿ ಖಾಸಗಿ ವಿದ್ಯುತ್ ಲೈನ್ ಕಂಬ ಇತ್ತು. ಕಂಬ ಇರದಿದ್ದರೆ ಕೆಳಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿಗೆ ಮಿನಿ ಬಸ್ಸು ಬೀಳುವ ಸಾಧ್ಯತೆಯಿತ್ತು. ಕಳೆದ ವರ್ಷ ಇದೇ ಭಾಗದಲ್ಲಿ ಆಟೊ ನದಿಗೆ ಉರುಳಿ ಬಿದ್ದು ಮಹಿಳೆ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಬಳಿಕ ಇಲ್ಲಿ ಮಣ್ಣಿನ ದಿಬ್ಬ ರಚಿಸಲಾಗಿತ್ತು.

RELATED ARTICLES
- Advertisment -
Google search engine

Most Popular