Friday, January 17, 2025
Homeಬಂಟ್ವಾಳಪುಣಚ ಗ್ರಾಮದಲ್ಲಿ ಸರಕಾರಿ ಜಾಗದಲ್ಲೇ ಗಣಿಗಾರಿಕೆ.!!

ಪುಣಚ ಗ್ರಾಮದಲ್ಲಿ ಸರಕಾರಿ ಜಾಗದಲ್ಲೇ ಗಣಿಗಾರಿಕೆ.!!

ಪ್ರಕೃತಿ ನಾಶ – ಸರಕಾರಿ ಜಾಗದಲ್ಲಿ ಕೆಂಪು ಕಲ್ಲಿನ ಕೊರೆ ಸರಕಾರಿ ಜಾಗವನ್ನು ತನ್ನ ಸ್ವಂತಜಾದಂತೆ
ಅಕ್ರಮವಾಗಿ ಕೆಂಪು ಕಲ್ಲಿನ ಕೊರೆ ನಡೆಸುತ್ತಿರುವ ವ್ಯಕ್ತಿ

ಬಂಟ್ವಾಳ : ಪುಣಚ ಗ್ರಾಮದಲ್ಲಿರುವ ಮೂಡಂಬೈಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕೊರೆ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮನಸೋಯಿಚ್ಛೆ ಕಲ್ಲು ತೆಗೆದು ಸಾಗಾಟ ಮಾಡುತ್ತಿದ್ದು ಇವರ ವಿರುದ್ಧ ಯಾವುದೇ ಕ್ರಮ ಜರಗಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಕುದಿಕಪಾದೆ ಎಂಬಲ್ಲಿರುವ ಸರಕಾರಿ ಜಾಗವನ್ನು ತಮ್ಮ ಸ್ವಂತ ಜಾಗದಂತೆ ಬೇಕಾದ ಎಲ್ಲಾ ಮಿಷನ್ ಗಳನ್ನ ಇಳಿಸಿ ಮನಸೋಯಿಚ್ಛೆ ಕೊರೆ ನಡೆಸುತ್ತಿದ್ದಾರೆ. ಜಯರಾಮ ರೈ  ಎನ್ನುವವರು ಇತಂಹ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಪ ದೂರದಲ್ಲೇ ಶಾಲೆ ಹಾಗೂ ಕೊರೆಯ ಹತ್ತಿರವೇ ಸುಮಾರು ಮನೆಗಳು ಇದ್ದು ಭಯದ ವಾತಾವರಣವೂ ಸೃಷ್ಟಿಯಾಗಿದೆ.

ಸರಕಾರಿ ಜಾಗದಲ್ಲಿ ಈ ರೀತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು ದುರಂತ ನೋಡಿ, ಪ್ರಕೃತಿ ರಕ್ಷಣೆಯ ಬದಲು ಭಕ್ಷಣೆಯ ಕೆಲಸ ನಡೆಯುತ್ತಿದೆ. ಪ್ರಭಾವೀ ವ್ಯಕ್ತಿಗಳು ಅಕ್ರಮವಾಗಿ ಕೆಂಪುಕಲ್ಲಿನ ಗಣಿಗಾರಿಕೆಯನ್ನು ನಡೆಸಿ ಭಾರೀ ಪರಿಸರ ನಾಶ ಮಾಡುತ್ತಿದ್ದಾರೆ. ಗಣಿ ಇಲಾಖಾ ಅಧಿಕಾರಿಗಳ ಕಣ್ಣಿಗೆ ಅಥವಾ ಗಮನಕ್ಕೆ ಇನ್ನೂ ಬಂದಿಲ್ಲವೇ.?? ರಾಜಕೀಯ ಮತ್ತು ಹಣದ ಬಲದಿಂದ ಬೃಹತ್ ಮಟ್ಟದ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರ ಎನ್ನುವ ಅನುಮಾನವು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಒಟ್ಟಾರೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಿಂದ ತನ್ನ ಸ್ವಂತ ಲಾಭಕ್ಕೆ ಈ ರೀತಿಯಾಗಿ ಪ್ರಕೃತಿ ನಾಶ ಮಾಡುತ್ತಿರುವುದು ನಿಜಕ್ಕೂ ಆತಂಕದ ವಿಚಾರ. ಹಲವು ಸಮಯಗಳಿಂದನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಂಬoಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನಾದ್ರು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರಾ.? ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕ್ತಾರ.? ಅನ್ನೋದನ್ನು ಕಾದು ನೋಡಬೇಕಿದೆ

RELATED ARTICLES
- Advertisment -
Google search engine

Most Popular