ಗುರುಪುರ: ದುಷ್ಕರ್ಮಿಯೊಬ್ಬ ಬಾಲಕಿಯೊಬ್ಬಳನ್ನು ಅಪ್ಪಿ ಹಿಡಿದು, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಅತ್ಯಾಚಾರದ ಬೆದರಿಕೆಯೊಡ್ಡಿರುವ ಘಟನೆ ಪೊಳಲಿಯಲ್ಲಿ ನಡೆದಿದೆ. ಏ.24ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಎಂಬಾತ ಹಿಂದಿನಿಂದ ಬಂದು ಬಾಲಕಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಲ್ಲದೆ, ಆಕೆಯ ಎದೆಭಾಗ ಹಾಗೂ ಕೈಗಳನ್ನು ಹಿಡಿದು ಹಿಂದಿರುಗಲೂ ಬಿಟ್ಟಿಲ್ಲ ಎನ್ನಲಾಗಿದೆ. ನಿನ್ನ ಮೊಬೈಲ್ ನಂಬರ್ ಕೊಡು, ಇಲ್ಲದಿದ್ದರೆ ನಿನ್ನನ್ನು ರೇಪ್ ಮಾಡದೆ ಬಿಡುವುದಿಲ್ಲ. ನನಗೆ ನೀನು ಬೇಕು ಎಂದು ಆರೋಪಿಯು ಹೇಳಿದ್ದಾಗಿ ಆಪಾದಿಸಲಾಗಿದೆ. ಅಷ್ಟರಲ್ಲಿ ಬಾಲಕಿ ಜೋರಾಗಿ ಕಿರುಚಿದ್ದು, ಅಲ್ಲಿಗೆ ಸಂಬಂಧಿಕನೊಬ್ಬ ಬರುವುದನ್ನು ನೋಡಿ ದುಷ್ಕರ್ಮಿಯು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ.