Monday, January 13, 2025
Homeಬೆಂಗಳೂರುಕಾಣೆಯಾದ ಬೀದಿ ನಾಯಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್​ಐಆರ್ ದಾಖಲು

ಕಾಣೆಯಾದ ಬೀದಿ ನಾಯಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್​ಐಆರ್ ದಾಖಲು

ಬೆಂಗಳೂರು: ಕಾಣೆಯಾದ ಬೀದಿ ನಾಯಿಗಾಗಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟೆ ವರದಿಯಗಿದೆ.

ಕಲ್ಯಾಣ ನಗರದ ಹೆಚ್​ಆರ್​ಬಿಆರ್ ಲೇಔಟ್​ ನಿವಾಸಿ ಡಾ. ಪುನೀತಾ ರಂಗಸ್ವಾಮಿಯವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.
ಬೀದಿ ನಾಯಿಗೆ ಹಿಂಸೆ ನೀಡಿ, ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ಪುನೀತಾ ತಮ್ಮದೇ ಲೇಔಟ್​ನ ಅನಿಲ್ ಎಂಬವರು ವಿರುದ್ಧ ಆರೋಪ ಮಾಡಿದ್ದಾರೆ.

ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ 14ರ ರಾತ್ರಿ 11 ಗಂಟೆಯಿಂದ 15ರ ಮಧ್ಯಾಹ್ನ 12 ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular