Sunday, July 14, 2024
Homeಮಂಗಳೂರುನಾಪತ್ತೆಯಾಗಿದ್ದ ಕದ್ರಿಯ ಮಹಿಳೆ ವಿಮಾನ ನಿಲ್ದಾಣದಲ್ಲಿ ಪತ್ತೆ

ನಾಪತ್ತೆಯಾಗಿದ್ದ ಕದ್ರಿಯ ಮಹಿಳೆ ವಿಮಾನ ನಿಲ್ದಾಣದಲ್ಲಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಕದ್ರಿಯ ಮಹಿಳೆಯೊಬ್ಬರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಮಹಿಳೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೊಲೀಸರು  ಕುಟುಂಬದೊಂದಿಗೆ ಕಳುಹಿಸಿಕೊಡಲಾಗಿದೆ.

ವಿಮಾನ ನಿಲ್ದಾಣದ ನಿರ್ಗಮನ ದ್ವಾರದ  ಬಳಿಯಿದ್ದ ಮಹಿಳೆಯನ್ನು ಅನುಮಾನಗೊಂಡ ಭದ್ರತಾಸಿಬ್ಬಂದಿ ವಿಚಾರಿಸಿದ್ದಾರೆ. ಆದರೆ ಆಕೆ ಸಮರ್ಪಕ ಉತ್ತರ ನೀಡುತ್ತಿರಲಿಲ್ಲ. ತನ್ನನ್ನು ಸ್ವಾಗತಿಸಲು ಜನರು ಬರುತ್ತಿದ್ದಾರೆ ಎಂದು ಮಹಿಳೆ ಹೇಳುತ್ತಿದ್ದರು.. ಬಳಿಕ  ಪೊಲೀಸರಿಗೆ ಮಾಹಿತಿ ನೀಡಿದಾಗ ಆಕೆ ನಾಪತ್ತೆಯಾಗಿದ್ದ ಮಹಿಳೆ ಎಂದು ಗೊತ್ತಾಯಿತು. 

ಮಹಿಳೆ ಯಾವುದೋ ಗೊಂದಲದಿಂದ ಕದ್ರಿಯಿಂದ ವಿಮಾನ ನಿಲ್ದಾಣದತ್ತ ಆಟೊ ರಿಕ್ಷಾದಲ್ಲಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular