Tuesday, January 14, 2025
Homeಬೆಳ್ತಂಗಡಿವೇಣೂರಿನಲ್ಲಿ ಯುವತಿ ನಾಪತ್ತೆ: ದೂರು ದಾಖಲು

ವೇಣೂರಿನಲ್ಲಿ ಯುವತಿ ನಾಪತ್ತೆ: ದೂರು ದಾಖಲು

ಬೆಳ್ತಂಗಡಿ: ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂಟಾಲಪಲ್ಕೆ ನಿವಾಸಿ ಕು.ಆಶ್ವಿಯಾ ಜಿ. (21) ನಾಪತ್ತೆಯಾದ ಯುವತಿ. ಯುವತಿಯ ತಂದೆ ನೀಡಿದ ದೂರಿನಂತೆ ಮಗಳು ಆಶ್ವಿಯಾ ಜಿ. ಎಸ್ಎಸ್ಎಲ್‌ಸಿ ವಿದ್ಯಾಭ್ಯಾಸದ ನಂತರ ಮನೆಯಲ್ಲಿಯೇ ಇದ್ದಳು. ಜ. 3ರಂದು ಮಧ್ಯಾಹ್ನ 3ಗಂಟೆಯಿಂದ ರಾತ್ರಿ 7 ಗಂಟೆಯ ಮಧ್ಯದ ಅವಧಿಯಲ್ಲಿ ತಂದೆ ಮತ್ತು ಅವರ ಹೆಂಡತಿ ಚಿಕಿತ್ಸೆಗೆ ಬಿ.ಸಿ.ರೋಡ್ ಹೋದ ಸಮಯ, ಮಗಳು ಕಾಣೆಯಾಗಿದ್ದಾಳೆ. ಆಕೆಯ ಬಗ್ಗೆ ಹತ್ತಿರದ ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರು ಪತ್ತೆಯಾಗಲಿಲ್ಲ.

ಈ ಬಗ್ಗೆ ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular