Wednesday, February 19, 2025
HomeUncategorizedನಾಯಕತ್ವ ರೂಪಿಸಲು ಅಸ್ತಿತ್ವಕ್ಕೆ ಬಂದಿದೆ ಎಂಎಲ್ಎ ಅಕಾಡೆಮಿ ; ವಿವಿಧ ಡಿಪ್ಲೊಮಾ ಕೋರ್ಸ್ ಗಳು ಆರಂಭ.

ನಾಯಕತ್ವ ರೂಪಿಸಲು ಅಸ್ತಿತ್ವಕ್ಕೆ ಬಂದಿದೆ ಎಂಎಲ್ಎ ಅಕಾಡೆಮಿ ; ವಿವಿಧ ಡಿಪ್ಲೊಮಾ ಕೋರ್ಸ್ ಗಳು ಆರಂಭ.

ಬೆಂಗಳೂರು; “ನೀವು ಜನಪ್ರತಿನಿಧಿ ಆಗಬೇಕೇ. ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೇ, ಅದಕ್ಕಾಗಿಯೇ ಆರಂಭವಾಗಿದೆ ಎಂ.ಎಲ್.ಎ ಅಕಾಡೆಮಿ”. ಹೌದು ಸಂವಿಧಾನ ದಿನದಂದೇ ಎಂ.ಎಲ್.ಎ ಅಕಾಡೆಮಿ ಅಸ್ಥಿತ್ವಕ್ಕೆ ಬಂದಿದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು, ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವ ಸಮಾಜಕ್ಕೆ ಎಲ್ಲಾ ರೀತಿಯಿಂದಲೂ ಅನುಕೂಲ ಮಾಡುವ ಉದ್ದೇಶವನ್ನು ಅಕಾಡೆಮಿ ಹೊಂದಿದೆ.
ದೇಶದಲ್ಲಿ ಪ್ರತಿಯೊಂದು ವಿಷಯಕ್ಕೆ ಒಂದೊಂದು ಕೋರ್ಸ್ ಗಳಿವೆ. ಲೆಕ್ಕವಿಲ್ಲದಷ್ಟು ಅಕಾಡೆಮಿಗಳಿವೆ. ಆದರೆ ನಾಯಕತ್ವ ಬೆಳವಣಿಗೆಗಾಗಿ “ಮೇಕಿಂಗ್ ಲೀಡರ್ಸ್ ಅಕಾಡೆಮಿ – ಎಂ.ಎಲ್.ಎ ಅಕಾಡೆಮಿ” ಕಾರ್ಯನಿರ್ವಹಿಸಲಿದೆ.
ಅಕಾಡೆಮಿ ಪ್ರಧಾನ ಕಚೇರಿ ಸ್ಥಳವಾದ ನಗರದ ನಾಗರಭಾವಿಯ ಗಾರ್ಡನ್ ವಿಲ್ಲಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ರಾಜನೀತಿ ಬೋಧಿಸುವವರು, ವಿವಿಧ ವಿಷಯಗಳ ಪ್ರಾಧ್ಯಾಪಕರು, ಸಮಾಜದ ವಿವಿಧ ವರ್ಗದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈಗಿನ ಪರಿಸ್ಥಿತಿಯಲ್ಲಿ ನಾಯಕತ್ವ ನಿರ್ಮಿಸುವ ಸಂಸ್ಥೆಯ ಅಗತ್ಯತೆ ಬಗ್ಗೆ ಬಲವಾಗಿ ಪ್ರತಿಪಾದಿಸಿದರು.
ರಾಜಕೀಯ ನಾಯಕತ್ವ ರೂಪುಗೊಂಡರೆ ಸಾಮಾಜಿಕ, ಆರ್ಥಿಕ‌ ಒಳಗೊಂಡಂತೆ ಎಲ್ಲಾ ರೀತಿಯಿಂದ ಅನುಕೂಲವಾಗಲಿದೆ. ಸದೃಢ ನಾಯಕತ್ವದಿಂದ ಬಲವಾದ ರಾಜಕೀಯ ವ್ಯವಸ್ಥೆ ನಿರ್ಮಿಸಬಹುದು ಎಂದು ಹೇಳಿದರು.
ಅಕಾಡೆಮಿಯಲ್ಲಿ ಡಿಪ್ಲೊಮಾ ಇನ್ ಯೂಥ್ ಡೆವಲಪ್ಮೆಂಟ್ ಅಂಡ್ ಲೀಡರ್ ಶಿಪ್, ಡಿಪ್ಲೊಮಾ ಇನ್ ಜನರಲ್ ಸ್ಟಡೀಸ್ ಅಂಡ್ ಗ್ಲೋಬಲ್ ಲೀಡರ್ ಶಿಪ್, ಡಿಪ್ಲೊಮಾ ಇನ್ ಸೋಷಿಯಲ್‌ ವರ್ಕ್ ಲೀಡರ್ ಶಿಪ್, ಡಿಪ್ಲೊಮಾ ಇನ್ ಪೊಲಿಟಿಕಲ್ ಲೀಡರ್ ಶಿಪ್, ‌ಡಿಪ್ಲೊಮಾ ಇನ್ ಪೊಲಿಟಿಕಲ್ ಲೀಡರ್ ಶಿಪ್ ಕೋರ್ಸ್ ಗಳಿವೆ. ಹೆಚ್ಚಿನ ಮಾಹಿತಿಗಾಗಿ www.makingleadersacademy.org ಭೇಟಿ ನೀಡುವಂತೆ ಕೋರಲಾಗಿದೆ.

RELATED ARTICLES
- Advertisment -
Google search engine

Most Popular