Monday, July 15, 2024
Homeಪುತ್ತೂರುಪುತ್ತೂರು | ಬಸ್ಸು ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿದ ಶಾಸಕ ಅಶೋಕ್‌ ರೈ; ವಿದ್ಯಾರ್ಥಿಗಳೊಂದಿಗೆ ಸಂವಾದ

ಪುತ್ತೂರು | ಬಸ್ಸು ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿದ ಶಾಸಕ ಅಶೋಕ್‌ ರೈ; ವಿದ್ಯಾರ್ಥಿಗಳೊಂದಿಗೆ ಸಂವಾದ

ಪುತ್ತೂರು: ಇಲ್ಲಿನ ಬಸ್ಸು ನಿಲ್ದಾಣಕ್ಕೆ ಆಗಮಿಸಿದ ಶಾಸಕ ಅಶೋಕ್‌ ರೈ ಅಲ್ಲಿದ್ದ ವಿದ್ಯಾರ್ಥಿಗಳ ಜೊತೆ ಅವರು ಎದುರಿಸುತ್ತಿರುವ ಬಸ್ಸು ಪ್ರಯಾಣದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಅಲ್ಲಿದ್ದ ನೂರಾರು ವಿದ್ಯಾರ್ಥಿಗಳು ತಮ್ಮೂರಿನ ರೂಟ್‌ಗಳಲ್ಲಿನ ಬಸ್ಸು ಓಡಾಟದ ಬಗ್ಗೆ ಇರುವ ಹಲವಾರು ಸಮಸ್ಯೆಗಳನ್ನು ಮುಂದಿಟ್ಟರು.
ಸೋಮವಾರ ಸಂಜೆ 4.15ಕ್ಕೆ ಪುತ್ತೂರು ಬಸ್ಸು ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿದ ಶಾಸಕರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಬಸ್ಸು ನಿಲ್ದಾಣದಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದು ಕುಳಿತಿದ್ದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಶೀಘ್ರದಲ್ಲೇ ಅವುಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳಿಗೆ ಮಾಹಿತಿ ನೀಡದೆ ಆಗಮಿಸಿದ್ದ ಶಾಸಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.
ವಿದ್ಯಾರ್ಥಿಗಳ ಅಭಿಪ್ರಾಯ ಆಲಿಸಿದ ಬಳಿಕ ಖುದ್ದಾಗಿ ಶಾಸಕರು ಕೆಲವು ಬಸ್ಸು ಏರಿ ವಿದ್ಯಾರ್ಥಿಗಳ ಸಂಕಷ್ಟ ಕೇಳಿದರು. ಕೆದಿಲ, ಕಾಣಿಯೂರು ರೂಟ್‌ನ ಬಸ್ಸು ಏರಿದ ಶಾಸಕರ ಮುಂದೆ ಬಸ್ಸು ವಿಳಂಬವಾಗಿ ಬರುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.

RELATED ARTICLES
- Advertisment -
Google search engine

Most Popular