Tuesday, April 22, 2025
Homeಮಂಗಳೂರುಡೆಂಗ್ಯೂ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಗ್ರಹ

ಡೆಂಗ್ಯೂ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಗ್ರಹ

ಸುರತ್ಕಲ್:ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಧಿಕಾರ ಜಗಳದಲ್ಲಿ ಜನರ ಸುರಕ್ಷತೆಗೆ ಗಮನ ನೀಡದೇ, ರಾಜ್ಯದಲ್ಲಿ ಡೆಂಗ್ಯೂ, ಝೀಕಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ದಾಖಲಾಗುತ್ತಿದ್ದು, ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಯ ದರ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲ ,
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಮುಖ್ಯವಾಗಿ ಸ್ವಚ್ಛತೆ ಕಾಪಾಡಬೇಕು. ಜತೆಗೆ ಕೋವಿಡ್ ಮಾದರಿಯಲ್ಲಿ ಡೆಂಗ್ಯೂ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಗ್ರಹಿಸಿದರು.

ಸುರತ್ಕಲ್ ಉತ್ತರ ಕ್ಷೇತ್ರದಲ್ಲಿ ತಮ್ಮನ್ನು ಭೇಟಿಯಾದ ಜನರ ಮನವಿ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್‌ ಮಂಡನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವ ಇಲಾಖೆಗಳಿಗೆ ಸೂಕ್ತ ಅನುದಾನ ನೀಡದೇ, ಗ್ಯಾರಂಟಿಗಳ ಜಾರಿಗೆ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ವರ್ಗಾವಣೆ ಮಾಡುವ ಮೂಲಕ ರಾಜ್ಯದ ಅಭಿವೃದ್ದಿಗೆ ಬ್ರೇಕ್‌ ಹಾಕಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆರೋಪಿಸಿದರು.

ಉತ್ತರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಗೆ ಚಿಕ್ಕಾಸು ನೀಡಿಲ್ಲ.ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ.ಕಾಮಗಾರಿ ಮಾಡಲೂ ಗುತ್ತಿಗೆದಾರರು ಹಣ ಬಿಡುಗಡೆಯಾಗುವ ಸಂದೇಹದಿಂದ ಮುಂದೆ ಬರುತ್ತಿಲ್ಲ.ಹೀಗಾದರೆ ರಾಜ್ಯ ಅಭಿವೃದ್ಧಿ ಯಲ್ಲಿ ಕನಿಷ್ಟ 10 ವರ್ಷದಷ್ಟು ಹಿಂದೆ ಸಾಗಲಿದೆ ಎಂದರು.

ಬಿಜೆಪಿ ಸರಕಾರ ಕೃಷಿಗೆ 9,456 ಕೋಟಿ ರೂ. ಮೀಸಲಿಟ್ಟಿದ್ದನ್ನು ಕಡಿತಗೊಳಿಸಿ 5,860 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಇದು ರೈತ ವಿರೋಧಿ ನೀತಿಯಾಗಿದೆ. ನಮ್ಮ ಸರಕಾರ ಪ್ರಾರಂಭ ಮಾಡಿದ್ದ ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಹಾಗೂ ಫೆಬ್ರವರಿ ಬಜೆಟ್‌ನಲ್ಲಿ ಘೋಷಿಸಿರುವ ಭೂಸಿರಿ ಯೋಜನೆ, 56 ಲಕ್ಷ ಸಣ್ಣ ರೈತರಿಗೆ 180 ಕೋಟಿ ರೂ. ಮೊತ್ತದ ಜೀವನಜ್ಯೋತಿ ವಿಮಾ ಯೊಜನೆಗಳನ್ನು ಕೈ ಬಿಟ್ಟಿದ್ದಾರೆ ಎಂದರು.
ಬಜೆಟ್‌ ನಲ್ಲಿ ಶಾಲಾ ಮಕ್ಕಳಿಗೆ 1000 ಹೊಸ ಬಸ್‌ , ಪದವಿವರೆಗೂ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡುವುದಾಗಿ ಬಿಜೆಪಿ‌ ಘೋಷಿಸಿತ್ತು.

ಐದು ಎಂಜನಿಯರಿಂಗ್‌ ಕಾಲೇಜು ಐಐಟಿಗೆ ಮೇಲ್ದರ್ಜೆಗೆ ಏರಿಸುವುದನ್ನು ಕೈ ಬಿಡುವ ಜತೆಗೆ ಬಸ್ಸೂ ಇಲ್ಲ. ಉಚಿತ ಶಿಕ್ಷಣವೂ ಇಲ್ಲದಂತಾಗಿದೆ.
ಮೂಲಕ ಶಿಕ್ಷಣ ಕ್ಷೇತ್ರಕ್ಕೆ,ವಿದ್ಯಾರ್ಥಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅನುದಾನವನ್ನು 20 ಸಾವಿರದಿಂದ 18 ಸಾವಿರ ಕೋಟಿ ರೂ.ಗೆ ಇಳಿಸಿರುವುದು ಗ್ರಾಮೀಣ ಭಾಗದಲ್ಲಿ ದುಡಿಯುವ ಕೈಗಳಿಗೆ ಅನ್ಯಾಯ ಮಾಡಿದಂತಾಗಿದೆ. ಇದರ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನದಲ್ಲಿ ಎಸ್‌ಸಿಎಸ್‌ಪಿ– ಟಿಎಸ್‌ಪಿಯ 11 ಸಾವಿರ ಕೋಟಿಯನ್ನು ಐದು ‘ಗ್ಯಾರಂಟಿ’ಗಳ ಜಾರಿಗಾಗಿ ಬಳಕೆ ಮಾಡುವ ರಾಜ್ಯ ‍ಪರಿಷತ್‌ನ ತೀರ್ಮಾನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

RELATED ARTICLES
- Advertisment -
Google search engine

Most Popular