Tuesday, December 3, 2024
Homeರಾಷ್ಟ್ರೀಯವಂದೇ ಭಾರತ್‌ ರೈಲಿಗೆ ಚಾಲನೆ ನೀಡುವಾಗ ಹಳಿಯ ಮೇಲೆ ಬಿದ್ದ ಶಾಸಕಿ | ಇನ್ನೊಂದು ನಿಮಿಷದಲ್ಲಿ...

ವಂದೇ ಭಾರತ್‌ ರೈಲಿಗೆ ಚಾಲನೆ ನೀಡುವಾಗ ಹಳಿಯ ಮೇಲೆ ಬಿದ್ದ ಶಾಸಕಿ | ಇನ್ನೊಂದು ನಿಮಿಷದಲ್ಲಿ ಹೊರಡಲಿದ್ದ ಹೈ ಸ್ಪೀಡ್‌ ರೈಲಿನ ಮುಂದೆ ಬಿದ್ದ ಶಾಸಕಿಗೆ ಏನಾಯ್ತು?

ಲಖನೌ: ವಂದೇ ಭಾರತ್ ಹೊಸ ರೈಲಿಗೆ ಚಾಲನೆ ನೀಡುವ ವೇಳೆ ಉಂಟಾದ ನೂಕುನುಗ್ಗಲಿನಿಂದಾಗಿ ಶಾಸಕಿಯೊಬ್ಬರು ರೈಲ್ವೆ ಹಳಿ​ ಮೇಲೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದೆ. ಇಟಾವಾದಲ್ಲಿ ಆಗ್ರಾ-ವಾರಣಾಸಿ ವಂದೇ ಭಾರತ್​ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್​ಎ ಸರಿತಾ ಬದೋರಿಯಾ ಭಾಗಿಯಾಗಿದ್ದರು. ಈ ವೇಳೆ ವಿಪರೀತ ಜನಜಂಗುಳಿ ಇದ್ದ ಕಾರಣ, ಕೈಯಲ್ಲಿ ಬಾವುಟ ಹಿಡಿದು ರೈಲಿಗೆ ಚಾಲನೆ ನೀಡುವ ವೇಳೆ ಸರಿತಾ ನೂಕುನುಗ್ಗಲಿನಿಂದಾಗಿ ರೈಲ್ವೆ ಟ್ರ್ಯಾಕ್​ ಮೇಲೆ ಬಿದ್ದಿದ್ದಾರೆ.
ಸರಿತಾ ರೈಲು ಕಂಬಿಯ ಮೇಲೆ ಬಿದ್ದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೇನು ಒಂದೆರಡು ನಿಮಿಷದೊಳಗೆ ಹೊರಡಲಿದ್ದ ರೈಲಿನ ಹಳಿಯ ಮೇಲೆ ಶಾಸಕಿ ಬಿದ್ದಿದ್ದಾರೆ. ಶಾಸಕಿ ಸರಿತಾ ಕೆಳಕ್ಕೆ ಬಿದ್ದ ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಭದ್ರತಾ ಸಿಬ್ಬಂದಿ ಹಾಗೂ ಪಕ್ಷದ ಕಾರ್ಯಕರ್ತರು ಅವರಿಗೆ ಸಹಾಯ ನೀಡಿ ಮೇಲೆಕ್ಕೆ ಕರೆದುಕೊಂಡು ಬಂದಿದ್ದಾರೆ.
ಆದರೆ ಸರಿತಾ ಅವರಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯಗಳು ಆಗಿಲ್ಲ. ಘಟನೆ ನಡೆದ ಬಳಿಕ ಅಂದಕೊಂಡಂತೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಅದು ಹಳಿಯ ಮೇಲೆ ಸರಾಗವಾಗಿ ತನ್ನ ಗುರಿಯತ್ತ ತಲುಪಿತು. ಆದರೆ, ಒಂದು ಕ್ಷಣ ಸ್ಥಳದಲ್ಲಿದ್ದವರೆಲ್ಲಾ ಆತಂಕಕ್ಕೀಡಾಗಿದ್ದರು.

ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/ians_india/status/1835682962936930439?ref_src=twsrc%5Etfw%7Ctwcamp%5Etweetembed%7Ctwterm%5E1835682962936930439%7Ctwgr%5E573bb7ecd9b19f4dc22e148416eed8c819ea8065%7Ctwcon%5Es1_&ref_url=https%3A%2F%2Fnewsfirstlive.com%2Fbjp-mla-sarita-bhadoria-falls-on-tracks-in-front-of-vande-bharat%2F

RELATED ARTICLES
- Advertisment -
Google search engine

Most Popular