ಶಿರ್ತಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಜುನಪುರ ಶಿರ್ತಾಡಿಗೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪ್ರಗತಿ ಕಾರ್ಯವನ್ನು ಪರಿಶೀಲನೆ ನಡೆಸಿದರು. ಶಾಸಕರಾಗಿ ಮರು ಆಯ್ಕೆಗೊಂಡು ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಕ್ಷೇತ್ರದ ಪರವಾಗಿ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ ವಿ ಶೆಟ್ಟಿ, ಜಯಾನಂದ ಶೆಟ್ಟಿ ಗೇoದೊಟ್ಟು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕೋಶಾಧಿಕಾರಿ ಪ್ರಭಾಕರ್, ಸೇವಾ ಸಮಿತಿ ಅಧ್ಯಕ್ಷ ಬಲರಾಮ ಪ್ರಸಾದ್ ಭಟ್, ಶಶಿಧರ್ ದೇವಾಡಿಗ, ಬಿಜೆಪಿ ಮುಖಂಡ ಸುಕೇಶ್ ಶೆಟ್ಟಿ, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ದಾರಕ್ಕೆ ಸರಕಾರದಿಂದ ಹೆಚ್ಚುವರಿ ಅನುದಾನ ಒದಗಿಸಿಕೊಡಲು ಶಾಸಕರಲ್ಲಿ ಕೋರಲಾಯಿತು.