Saturday, April 19, 2025
HomeUncategorized₹35 ಲಕ್ಷ ವೆಚ್ಚದಲ್ಲಿ ಕಲ್ಮಾಡಿ ದೇವರಕೆರೆ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

₹35 ಲಕ್ಷ ವೆಚ್ಚದಲ್ಲಿ ಕಲ್ಮಾಡಿ ದೇವರಕೆರೆ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡಿನ ಗರೋಡಿ ಬಳಿಯ ದೇವರಕೆರೆ ಅಭಿವೃದ್ದಿ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆ ವತಿಯಿಂದ ಸುಮಾರು 35 ಲಕ್ಷ ವೆಚ್ಚದಲ್ಲಿ ದೇವರ ಕೆರೆ ಅಭಿವೃದ್ಧಿ ನಡೆಯಲಿದ್ದು, ಕೆರೆಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟವನ್ನು ಸುಧಾರಿಸಲು ಕೆರೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ ಕಲ್ಮಾಡಿ, ಸ್ಥಳೀಯ ಮುಖಂಡರಾದ ಶ್ರೀ ಲಕ್ಷ್ಮೀಶ ಬಂಗೇರ, ಶ್ರೀ ವಿನಯ ಕಲ್ಮಾಡಿ, ಶ್ರೀ ವಿವೇಕ್, ಶ್ರೀ ದಾಮೋದರ ಕಲ್ಮಾಡಿ, ಶ್ರೀ ರಾಘವ ಪೂಜಾರಿ, ಶ್ರೀ ರಮೇಶ್ ಮಾಸ್ಟರ್, ಇಂದಿರಾ ಶೇಖರ್, ಚಂದ್ರಕಾಂತ ಕಲ್ಮಾಡಿ, ಶ್ರೀ ಜಯರಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular