Tuesday, April 22, 2025
Homeಉಡುಪಿಉಡುಪಿ ನಗರಸಭೆ ವಿವಿಧ ಬೇಡಿಕೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್ ರವರಿಗೆ ಶಾಸಕ ಯಶ್...

ಉಡುಪಿ ನಗರಸಭೆ ವಿವಿಧ ಬೇಡಿಕೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್ ರವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ರವರು ಪೌರಾಡಳಿತ ಸಚಿವರಾದ ಶ್ರೀ ರಹೀಂ ಖಾನ್ ರವರನ್ನು ಭೇಟಿಯಾಗಿ ಉಡುಪಿ ನಗರಸಭೆಗೆ ಸಂಬಂಧಿತ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಮಾಡಿದರು.

ಉಡುಪಿ ನಗರಸಭೆಗೆ ಪೂರ್ಣಕಾಲಿಕ ಖಾಯಂ ಪೌರಾಯುಕ್ತ ಹುದ್ದೆ ಖಾಲಿ ಇದ್ದು, ಕಳೆದ ಹಲವಾರು ತಿಂಗಳಿನಿಂದ ಪೂರ್ಣಕಾಲಿಕ ಪೌರಾಯುಕ್ತರಿಲ್ಲದೆ ನಗರಸಭೆಯ ಆಡಳಿತಾತ್ಮಕ ಕಾರ್ಯಗಳು ಹಾಗೂ ಸಾರ್ವಜನಿಕರ ದಿನನಿತ್ಯದ ಸೇವೆಗಳಿಗೆ ಸಮಸ್ಯೆಯಾಗುತ್ತಿರುವುದರಿಂದ ಪೂರ್ಣಕಾಲಿಕ ಪೌರಾಯುಕ್ತರನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಉಡುಪಿ ನಗರಸಭೆಯ ನೀರು ಸರಬರಾಜು ಅನುದಾನದಲ್ಲಿ ಲಭ್ಯವಿರುವ ನಿಧಿಯನ್ನು ಸಾಮಾನ್ಯ ನಿಧಿಯಾಗಿ ಸಿವಿಲ್ ಕಾಮಗಾರಿಗಳಿಗೆ ಬಳಸಲು ಸಲ್ಲಿಸಿದ ಪ್ರಸ್ತಾವನೆಗೆ ಶೀಘ್ರಅನುಮೋದನೆ, ನಗರಸಭೆಯ ನೂತನ ಕಛೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಉಡುಪಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖೆಯ ಮೂಲಕ ವಿಶೇಷ ಅನುದಾನ ಒದಗಿಸಿ ಸಹಕಾರ ನೀಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಸಚಿವರಿಗೆ ಕೋರಿದರು.

ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲೇ ನೇಮಕ ಹಾಗೂ ಅನುದಾನ ಬೇಡಿಕೆಯ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು

RELATED ARTICLES
- Advertisment -
Google search engine

Most Popular