Saturday, February 15, 2025
Homeರಾಷ್ಟ್ರೀಯಹತ್ತೇ ನಿಮಿಷದಲ್ಲಿ ಗಣಪನಿಗೆ ಪ್ರಿಯವಾದ ಮೋದಕ ಮನೆಯಲ್ಲೇ ತಯಾರಿಸಿ | ಗಣೇಶನಿಗೂ ಇಷ್ಟವಾಗುತ್ತೆ, ನಿಮಗೂ ಪ್ರಿಯವಾಗುತ್ತೆ!

ಹತ್ತೇ ನಿಮಿಷದಲ್ಲಿ ಗಣಪನಿಗೆ ಪ್ರಿಯವಾದ ಮೋದಕ ಮನೆಯಲ್ಲೇ ತಯಾರಿಸಿ | ಗಣೇಶನಿಗೂ ಇಷ್ಟವಾಗುತ್ತೆ, ನಿಮಗೂ ಪ್ರಿಯವಾಗುತ್ತೆ!

ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಣೇಶನಿಗೆ ಪ್ರಿಯವಾದ ತಿನಿಸುಗಳಲ್ಲಿ ಮೋದಕವೂ ಒಂದು. ಗಣೇಶನ ಹಬ್ಬದ ಸಮಯದಲ್ಲಿ ಈ ತಿಂಡಿ ಇದ್ದೇ ಇರುತ್ತದೆ. ಮೋದಕವನ್ನು ಬಹುತೇಕರು ಬೇಕರಿಯಿಂದ ತೆಗೆದುಕೊಂಡು ಬರುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಮೋದಕ ತಯಾರಿಸುತ್ತಾರೆ. ಆದರೆ ಸುಲಭವಾಗಿ ಮೋದಕವನ್ನು ಮಾಡಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಬರೀ 10 ನಿಮಿಷದಲ್ಲಿ ಮೋದಕವನ್ನು ತಯಾರಿಸುವ ಬಗೆ ಇಲ್ಲಿದೆ.
ಮೊದಲಿಗೆ ಒಂದು ಬೌಲ್​ ತೆಗೆದುಕೊಂಡು ಅದಕ್ಕೆ ಒಂದು ಕಪ್​ ಮೈದಾ ಹಿಟ್ಟು, ಒಂದು ಕಪ್​ ಗೋದಿ ಹಿಟ್ಟು, ರುಚಿಗೆ ತಕ್ಕ ಉಪ್ಪು, ಸಕ್ಕರೆ ಸೇರಿಸಿ. ಬಳಿಕ 2 ಚಮಚ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ದನದ ತುಪ್ಪದ ಬದಲು ಎಣ್ಣೆಯನ್ನು ಬಳಸಬಹುದಾಗಿದೆ.
2ರಿಂದ ಮೂರು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಕೊಂಚ ನೀರು ಸೇರಿಸುತ್ತಾ ಉಂಡೆ ಕಟ್ಟಲು ಆಗುವಂತೆ ಮಿಶ್ರಣ ಮಾಡಬೇಕು. ಬರಿ ಗೋಧಿ ಹಿಟ್ಟಿನಲ್ಲೂ ಮೋದಕ ತಯಾರಿಸಬಹುದಾಗಿದೆ. ಒಂದು ವೇಳೆ ಹಿಟ್ಟು ಕೈಯಲ್ಲಿ ಅಂಟಿಕೊಂಡರೆ ಕೈಗೆ ತೆಂಗಿನ ಎಣ್ಣೆ ಸವರಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ 14 ರಿಂದ 15 ನಿಮಿಷ ಹಾಗೆಯೇ ಬಿಡಿ.
ಮತ್ತೊಂದು ಬಾಣಲೆ ತೆಗೆದುಕೊಂಡು ಹೂರ್ಣ ತಯಾರಿಸಬೇಕು. ಅದಕ್ಕಾಗಿ ಹದ ಬಿಸಿಯಲ್ಲಿರುವ ಬಾಣಲೆಗೆ ಒಂದೂವರೆ ಕಪ್​ ತೆಂಗಿನ ತುರಿ, ಒಂದು ಕಪ್​ ಚೆನ್ನಾಗಿ ಹುಡಿ ಮಾಡಿದ ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬೆಂಕಿಯ ಬಿಸಿಗೆ ಬೆಲ್ಲ ಕರಗಲು ಪ್ರಾರಂಭವಾಗುತ್ತದೆ. ಬೆಲ್ಲ ಕರಗಿದ ಬಳಿಕ ಬಾಣಲೆಯನ್ನು ಬೆಂಕಿಯಿಂದ ಕೆಳಗಿಳಿಸಿ. ಬೇಕಿದ್ದರೆ ಕೊಂಚ ಏಲಕ್ಕಿ, ಡ್ರೈ ಫ್ರುಟ್ಸ್, ತುಪ್ಪ ಸೇರಿಸಬಹುದು. ​
ಇಷ್ಟಾದ ಬಳಿಕ ಮಿಶ್ರಣ ಮಾಡಿದ ಹಿಟ್ಟನ್ನು ಕೊಂಚ ಮೈದಕ್ಕೆ ಅದ್ದಿ ಚಪಾತಿಯಂತೆ ಲಟ್ಟಿಸಬೇಕು. ಬೇಕಾದ ಗಾತ್ರಕ್ಕೆ ಹಿಟ್ಟನ್ನು ಲಟ್ಟಿಸಬಹುದು. ಬಳಿಕ ತಯಾರಿಸಿಟ್ಟ ಹೂರ್ಣವನ್ನು ಅದರ ಮಧ್ಯಕ್ಕೆ ಇಟ್ಟು ಕೈಯಲ್ಲೇ ತಿರುಗಿಸುತ್ತಾ ಸರಿಯಾದ ಆಕಾರಕ್ಕೆ ತರಬೇಕು. ಬಳಿಕ ಕುದಿಯುವ ಎಣ್ಣೆಗೆ ಅದನ್ನು ಬಿಡಬೇಕು. ಸರಿಯಾಗಿ ಬೆಂದ ಬಳಿಕ ಎಣ್ಣೆಯಿಂದ ಮೇಲೆತ್ತಬೇಕು. ಈವಾಗ ಮೋದಕ ರೆಡಿ.

RELATED ARTICLES
- Advertisment -
Google search engine

Most Popular