ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಮೊಡಂಕಾಪು ಎಂಬಲ್ಲಿ ಕಳೆದ ೧೯೬೪ರಲ್ಲಿ ಆರಂಭಗೊಂಡ ದೀಪಿಕಾ ಪ್ರೌಢಶಾಲೆ ಇದೀಗ ವಜ್ರಮಹೋತ್ಸವ ಸಂಭ್ರಮದಲ್ಲಿದ್ದು, ಡಿ.೧ರಂದು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ ಮಲ್ಲಿ ಹೇಳಿದರು.
ಬಿ.ಸಿ.ರೋಡು ಸೂರ್ಯವಂಶ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ದೀಪಿಕಾ ಪ್ರೌಢಶಾಲೆಯಲ್ಲಿ ಓದಿದ ಸುಮಾರು ೬ ಸಾವಿರಕ್ಕೂ ಮಿಕ್ಕಿ ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಡಿ. ೧೪ ಮತ್ತು ೧೫ರಂದು ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಎಲ್ಲಾ ಹಳೆ ವಿದ್ಯಾರ್ಥಿಗಳು ಮತ್ತು ನಾಗರಿಕರು ಭಾಗವಹಿಸುವಂತೆ ಸಂಪರ್ಕಿಸಲು ಪ್ರತ್ಯೇಕ ವೆಬ್ ಸೈಟ್ ಸಹಿತ ವಿವಿಧ ಸಮಿತಿ ಮತ್ತು ಉಪ ಸಮಿತಿ ರಚಿಸಲಾಗಿದೆ ಎಂದರು.
ಇದೇ ವೇಳೆ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ, ಧರ್ಮಗುರು ವಲೇರಿಯನ್ ಡಿಸೋಜ ಮಾತನಾಡಿ, ‘ಪ್ರಸಕ್ತ ಶಾಲೆಯಲ್ಲಿ ಒಟ್ಟು ೧೯೮ ಮಂದಿ ವಿದ್ಯಾರ್ಥಿಗಳಿದ್ದು, ಮುಂದಿನ ದಿನಗಳಲ್ಲಿ ಉಚಿತ ಪುಸ್ತಕ, ಸಮವಸ್ತ್ರ ವಿತರಣೆಗೆ ಶಾಶ್ವತ ನಿಧಿ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದರು.
ಸಮಿತಿ ಕಾರ್ಯದರ್ಶಿ ಅರುಣ್ ರೋಶನ್ ಡಿಸೋಜ ಮಾತನಾಡಿ, ‘ಭವಿಷ್ಯದಲ್ಲಿ ದೀಪಿಕಾ ಪ್ರೌಢಶಾಲೆ ಮಾದರಿ ಪ್ರೌಢಶಾಲೆಯಾಗಿ ರೂಪುಗೊಳ್ಳಲಿದೆ’ ಎಂದರು.
ಮೊಡಂಕಾಪು: ದೀಪಿಕಾ ಪ್ರೌಢಶಾಲೆಗೆ:
ವಿಜ್ಞಾಪನಾ ಪತ್ರ ಬಿಡುಗಡೆ, ಡಿ.೧ರಂದು ಬೃಹತ್ ಕ್ರೀಡಾಕೂಟ ವಜ್ರಮಹೋತ್ಸವ ಸಂಭ್ರಮ
RELATED ARTICLES