Monday, March 17, 2025
Homeದಾವಣಗೆರೆಚನ್ನಗಿರಿ ಮನೆತನದ ಆಧುನಿಕ ಭೀಷ್ಮ- ಸಿ.ಆರ್. ವಿರೂಪಾಕ್ಷಪ್ಪ

ಚನ್ನಗಿರಿ ಮನೆತನದ ಆಧುನಿಕ ಭೀಷ್ಮ- ಸಿ.ಆರ್. ವಿರೂಪಾಕ್ಷಪ್ಪ

ದಾವಣಗೆರೆ ದಾನಿಗಳ ಊರು, ದೇವನಗರಿ ಎಂದೂ ಕರೆಯುತ್ತಾರೆ. ಅನೇಕ ಇತಿಹಾಸ ಹೊಂದಿರುವ ಈ ಊರು ಹಲವು ಪ್ರತಿಷ್ಠಿತ ಮನೆತನಗಳು ತಮ್ಮದೇ ಅದ ಛಾಪು ಮೂಡಿಸಿದೆ. ಅಂತಹ ಇತಿಹಾಸವಿರುವ ಒಂದುನೂರ ಇಪ್ಪತ್ನಾಲ್ಕು ವರ್ಷಗಳ ೩ ತಲೆಮಾರಿನ ಪರಪರೆ ಇರುವ ಮನೆತನ ಚನ್ನಗಿರಿ ವಂಶ. ದಾನ, ಧರ್ಮ, ಸಂಸ್ಕೃತಿ, ಧಾರ್ಮಿಕ, ಶಿಕ್ಷಣ ಹೀಗೆ ಹತ್ತು ಹಲವು ಸಾಮಾಜಿಕ, ಸಾರ್ವಜನಿಕ ಸೇವಾ ಕಾಳಜಿಯ ಕೈಂಕರ್ಯದ ಅಂದಿನಿAದ
ಇಂದಿನವರೆಗೆ ಕ್ರಿಯಾಶೀಲವಾಗಿ ಚಾಲನೆಯಲ್ಲಿರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನ ಚುಕ್ಕಾಣಿ ಹಿಡಿದು ಮುನ್ನೆಡಿಸಿ ಕೊಂಡುಹೋಗುವ ಹಿರಿಯಜೀವ ಶ್ರೀ ಸಿ.ಆರ್. ವಿರೂಪಾಕ್ಷಪ್ಪ. 99ರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಕ್ರಿಯಾಶೀಲತೆ, ಕೆಲಸ ಕಾರ್ಯಗಳಲ್ಲಿ ಬದ್ಧತೆ, ಶಿಕ್ಷಣ, ಸಾಂಸ್ಕೃತಿಕ ಚಟುವಟಕೆಗಳಲ್ಲಿರುವ ಬತ್ತದ ಉತ್ಸಾಹ. ನಿಜಕ್ಕೂ ಪ್ರಶಂಸನೀಯ. ಶ್ಲಾಘನೀಯ ಉಲ್ಲೇಖನೀಯವಾಗಿದೆ.
ಟ್ರಸ್ಟ್ ಆಶ್ರಯದಲ್ಲಿ ಉಚಿತ ವಿದ್ಯಾರ್ಥಿನಿಲಯ, ಧರ್ಮಛತ್ರ. ಪ್ರತೀ ವರ್ಷ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ. ಶಾಲೆಗಳಿಗೆ, ದೇವಸ್ಥಾನಗಳಿಗೆ ವನಿತಾ ಸಮಾಜ, ಸತ್ಯ ಸಾಯಿ ಟ್ರಸ್ಟ್ಗಳಿಗೆ ಉದಾರವಾದ ದೇಣಿಗೆ ಕಲಾಕುಂಚ, ಸಿನಿಮಾ ಸಿರಿ, ಆರ್ಯ ವೈಶ್ಯ ಸಮಾಜ ಇತರ ಸಂಘ ಸಂಸ್ಥೆಗಳಿಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ:
ದೇಣಿಗೆ, ನಿರ್ಗತಿಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದೇಣಿಗೆ ಜತೆಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ ಪರಿಕರ ವಿತರಣೆ ಇವೆಲ್ಲವೂ ಸಿ.ಆರ್. ವಿರೂಪಾಕ್ಷಪ್ಪನವರ ವಿಶಾಲ, ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿ. ಹಲವು ಮಠಮಾನ್ಯಗಳು, ಟ್ರಸ್ಟಿಗಳು ಒಂದು ಜಾತಿಗೆ, ಒಂದು ವರ್ಗದ ಓಲೈಕೆಗೆ ಸೀಮಿತವಾಗುವುದು ಸರ್ವೇ ಸಾಮಾನ್ಯ ಆದರೆ ಸಿ.ಆರ್. ವಿರೂಪಾಕ್ಷಪ್ಪನವರ ದೂರ ದೃಷ್ಟಿ ಸರ್ವಜನಾಂಗದ ಶಾಂತಿಯ ತೋಟ ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಎಲ್ಲಾ ಸೇವಾ ಕಾರ್ಯಗಳು ಸಾರ್ವತ್ರಿಕವಾಗಿ ಸಾರ್ವಜನಿಕವಾಗಿರುವುದು ಬಸವಣ್ಣನವರ “ಯುವನಾರವ ಇವ ನಮ್ಮವ” ಎಂಬ ವಚನ ಇಲ್ಲಿ ಪ್ರಸ್ತುತವೆನಿಸುತ್ತದೆ. ತಾವು ಹಮ್ಮಿಕೊಂಡ ಪೂರ್ವನಿಯೋಜಿತ ಕಾರ್ಯಕ್ರಮಗಳು ಅಚ್ಚುಕಟ್ಟು ತನ, ಶಿಸ್ತಿನಿಂದ ಕೂಡಿರುತ್ತಿದ್ದು ಅನಾರೋಗ್ಯವಿದ್ದರು. ಅದನ್ನು ಲೆಕ್ಕಿಸಿದೆ. ವರ್ಷಂಪ್ರತಿ ನಡೆಯುವ ಕಾರ್ಯಕ್ರಮಗಳಿಗೆ ಚ್ಯುತಿ ಬರದಂತೆ. ತಾವು ಸ್ವತಃ ಉಪಸ್ಥಿತರಿದ್ದು ನಡೆಸಿದ ಈ ಕಾರ್ಯ ಅವರ ಕಾಯಕ ಪ್ರಜ್ಞೆಗೆ, ಬದ್ಧತೆ ಇತರ ಸಂಘಟಕರಿಗೆ ಮಾದರಿ.

ಬಾಲ್ಯದಲ್ಲೇ ಮನೆತನದ ಜವಾಬ್ದಾರಿ ವಹಿಸಿಕೊಂಡ ಇವರು ಬಿ.ಕಾಂ. ಪದವಿ ಮುಗಿಸಿ ಟ್ರಸ್ಟಿನ ಜವಾಬ್ದಾರಿ ಹೆಗಲಿಗೊರಿಸಿಕೊಂಡರು. ದಾವಣಗೆರೆಯ ಇನ್ನೊಂದು ಪ್ರತಿಷ್ಠಿತ ಮನೆತನ ರಾಜನಹಳ್ಳಿ ವಂಶದ ಅಂದರೆ ಆರ್.ಹೆಚ್. ಶ್ರೀನಿವಾಸ್‌ಮೂರ್ತಿಯವರ ಸೋದರಿ ಸುನಂದಮ್ಮನವರನ್ನು 1944ರಲ್ಲಿ ತಮ್ಮ ಜೀವನ ಸಂಗಾತಿಯಾಗಿ ಸ್ವೀಕರಿಸಿ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದ ಸಿ.ಆರ್. ವಿರೂಪಾಕ್ಷಪ್ಪ ವಸಂತಪದ್ಮನವರಿಗೆ ಜನ್ಮ ನೀಡಿದರು ನಂತರ ಕಾಂತರಾಜ್‌ರೊಂದಿಗೆ ಅವರ ವಿವಾಹವಾಯಿತು. ಸುನಂದಮ್ಮನವರ ಅಕಾಲಿಕ ನಿಧನದ
ನಂತರ ವಿರೂಪಾಕ್ಷಪ್ಪನವರ ಸಹಧರ್ಮಿಣಿಯಾಗಿ 1960ರಲ್ಲಿ ವನಜಾಕ್ಷಮ್ಮನವರು ಚನ್ನಗಿರಿ ವಂಶ ಹಿರಿಯ ಸೊಸೆ ಸ್ಥಾನ ತುಂಬಿದರು.
ದಿನಾಂಕ 26-06-1926ರಂದು ಚನ್ನಗಿರಿ ರಂಗಪ್ಪ ರಾಧಮ್ಮನವರ ಪ್ರಥಮ ಪುತ್ರರಾಗಿ ಜನಿಸಿದ ಸಿ.ಆರ್.ವಿರೂಪಾಕ್ಷಪ್ಪ. ಬಾಲ್ಯದಿಂದಲು ಚಟುವಟಿಕೆಯ ಚಿಲುಮೆ, ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಲ್ಲೂ ಅಪಾರ ಸೇವೆ ಸಲ್ಲಿಸಿದ್ದ ಇವರು ಚಲನಚಿತ್ರ ಮಾಧ್ಯಮದಲ್ಲೂ ತಮ್ಮ ನೈಪುಣ್ಯದ ವ್ಯವಹಾರ ಜ್ಞಾನದಿಂದ ಶಾಂತಿ ಚಿತ್ರಮಂದಿರವನ್ನು ಅನೇಕ ವರ್ಷಗಳ ಕಾಲ ನಡೆಸಿದರು. ತಮ್ಮ ಜೀವನದಲ್ಲಿ ಅನೇಕ
ಏಳು, ಬೀಳುಗಳನ್ನು ಕಂಡ ಚನ್ನಗಿರಿ ವಂಶದ ಟ್ರಸ್ಟ್ಗಾಗಿ. ತಮ್ಮ 10 ದಶಕದ ಜೀವನವನ್ನು ತೇದಿದ್ದಾರೆ.
ವ್ಯವಹಾರದಲ್ಲೂ ಟ್ರಸ್ಟ್ಗಳಲ್ಲಿಯೂ ಅನೇಕ ಸವಾಲುಗಳನ್ನು ಎದಿರಿಸುತ್ತಾ ಹೊಗಳಿಕೆ ಬಂದಾಗ ಹಿಗ್ಗದೇ ತೆಗಳಿಕೆ ಬಂದಾಗ ಕುಗ್ಗದೇ ಎಲ್ಲವನ್ನು ಸಮಚಿತ್ತದಿಂದ ಸ್ಟೀಕರಿಸುವ ಮನೋಧರ್ಮದ ಸಿ.ಆರ್.ವಿರೂಪಾಕ್ಷಪ್ಪ. ದಾವಣಗೆರೆಯ ಸ್ಮಾರಕವಂದೇ ಪರಿಗಣಿಲ್ಪಟ್ಟಿದೆ. ಚನ್ನಗಿರಿ ರಂಗಪ್ಪ ಗಡಿಯಾರ
ಗೋಪುರ ನಗರಕ್ಕೆ ಕಳಶಪ್ರಾಯವಾಗಿದೆ. ಒಂದು ಹಂತದಲ್ಲಿ ಶಿಥಿಲಗೊಂಡಿರುವ ಈ ಸ್ಮಾರಕ. ಪುನರೋತ್ಥಾನಗೊಳಿಸಿ ಸ್ವತಂತ್ರವಾಗಿ ಅದರ ನಿರ್ವಹಣೆಯ ಹೊಣೆ ಹೊತ್ತು ಇಂದಿಗೂ
ದಾವಣಗೆರೆಯ ಜನತೆಗೆ ಸಮಯಪ್ರಜ್ಞೆ, ಮೂಡಿಸುತ್ತಿರುವ ಈ ಗಡಿಯಾರ ಗೋಪುರ ನಗರಕ್ಕೆ ದೊಡ್ಡ ಕೊಡುಗೆ ನೀಡಿದ್ದು ಸಿ.ಆರ್.ವಿರೂಪಾಕ್ಷಪ್ಪ. ಟ್ರಸ್ಟಿನ ಎಲ್ಲಾ ಟ್ರಸ್ಟಿಗಳನ್ನು ಒಗ್ಗೂಡಿಸಿ ಎಲ್ಲರ ಮನ ಒಲಿಸಿ
ಒಮ್ಮತದೊಂದಿಗೆ ತಮ್ಮ ಮನೆತನದ ಹಿರಿಯ ತಲೆಮಾರಿನ ಪ್ರತಿಷ್ಠೆಯನ್ನು, ಹೆಚ್ಚಿಸುವ ಉಳಿಸುವ, ಬೆಳೆಸುವ
ಧುಮುಕುತ್ತಿರುವ ಜಲಪಾತದೆದುರು ಈಜುವ ಸಾಹಸಕ್ಕೆ ಒಗ್ಗಿಕೊಂಡು ಹೋಗುವ ಮನೋಧರ್ಮ ಸಿ.ಆರ್. ವಿರೂಪಾಕ್ಷ ನೂರ್ಕಾಲ ಬಾಳಲಿ ಎಂದು ಹಾರೈಸೋಣ.

– ಸಾಲಿಗ್ರಾಮ ಗಣೇಶ್‌ಶೆಣೈ,
ದಾವಣಗೆರೆ.

RELATED ARTICLES
- Advertisment -
Google search engine

Most Popular