ಬಂಟ್ವಾಳ : ಸರ್ಕಾರಿ ಶಾಲೆಗೆ ನಿರಂತರವಾಗಿ ಬಿಸಿ ಊಟಕ್ಕಾಗಿ ತರಕಾರಿಗಳನ್ನು ಉಚಿತವಾಗಿ ನೀಡುವ ಬಂಟ್ವಾಳ ತಾಲೂಕಿನ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ಮಾಲಕ ಮಹಮ್ಮದ್ ಶರೀಫ್ ರಾಷ್ಟ್ರಮಟ್ಟದ ಭಾರತ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಗೋವಾದ ಪಣಜಿಯಲ್ಲಿ ಸಾಂತ್ವನ ಫೌಂಡೇಶನ್ ಹಾಗೂ ಕಲ್ಲಂಗುಟ್ ಕನ್ನಡ ಸಂಘ ಗೋವಾ ಇವರು ಹಮ್ಮಿಕೊಂಡಿರುವ ಸಂಕ್ರಾಂತಿ ಸಂಗೀತ ಸಂಭ್ರಮ ಸಮಾರಂಭದಲ್ಲಿ ಮಹಮ್ಮದ್ ಶರೀಫ್ ಅವರಿಗೆ ಸಮಾಜ ಸೇವೆಯ ಕ್ಷೇತ್ರದಲ್ಲಿ ಗುರುತಿಸಿ ಭಾರತ ಗೌರವ ಪ್ರಶಸ್ತಿಯನ್ನು ಗೋವಾ ಮಾಜಿ ಉಪ ಸಭಾಪತಿ ಹಾಗು ಶಾಸಕರಾದ ಮೈಕಲ್ ಲೋಬೋ. ಮತ್ತು ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೆಕಳ ಹಾಜ್ಜಬ್ಬ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಗೋವಾದ ಕಲ್ಲಂಗುಟಿ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ