ಸುಳ್ಯ:  ಮುಳ್ಳೇರಿಯ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಯಕ್ಷಸಿರಿ ಕಲಾವೇದಿಕೆ ಬನ್ನಡ್ಕ ಮೂಡಬಿದಿರೆ ಇದರ ವಿದ್ಯಾರ್ಥಿಗಳಿಂದ ‘ಮೋಕ್ಷ ಸಂಗ್ರಾಮ’ ಯಕ್ಷಗಾನ ತಾಳಮದ್ದಳೆ ಮತ್ತು ಬನಾರಿ ಕಲಾಸಂಘದ ಸದಸ್ಯರಿಂದ ಪಂಚವಟಿಯಿಂದಾಯ್ದ ರಾಮ ಲಕ್ಷ್ಮಣ ಮತ್ತು ಕೃಷ್ಣ ಸಂಧಾನ ಪ್ರಸಂಗದಿಂದ ಕರ್ಣ ಅಶ್ವತ್ಥಾಮ ಭಾಗಗಳನ್ನೊಳಗೊಂಡ ಯಕ್ಷಗಾನ ತಾಳಮದ್ದಳೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಯಕ್ಷಸಿರಿಯ ಸಂಚಾಲಕ ಕೆ. ಶ್ಯಾಮ ಭಟ್ ಖಂಡಿಗೆಮೂಲೆ ಅವರಿಂದ ಸೇವಾರೂಪವಾಗಿ ನಡೆಸಲ್ಪಟ್ಟ ಈ ತಾಳಮದ್ದಳೆಯ ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
           ಹಿಮ್ಮೇಳದಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ, ದಯಾನಂದ ಗೌಡ ಬಂದ್ಯಡ್ಕ ಹಾಗೂ ಚೆಂಡೆ ಮದ್ದಳೆಗಳಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಹೆಚ್.ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಸದಾನಂದ ಪೂಜಾರಿ ಮಯ್ಯಾಳ ಸಹಕರಿಸಿದರು. ಗೋಪಾಲಕೃಷ್ಣ ಕೆ.ಯಸ್ ಬನ್ನಡ್ಕ ಅವರ ಸಂಯೋಜನೆಯಲ್ಲಿ ಭಾಗವತ ವಿಶ್ವವಿನೋದ ಬನಾರಿಯವರ ಅರ್ಥ ಸಾಹಿತ್ಯವನ್ನೊಳಗೊಂಡ ಮೋಕ್ಷ ಸಂಗ್ರಾಮ ಪ್ರಸಂಗದಲ್ಲಿ ಅರ್ಥಧಾರಿಗಳಾಗಿ ಕುಮಾರಿ ಅಪೇಕ್ಷ ಬನ್ನಡ್ಕ (ಶ್ರೀರಾಮ), ಕುಮಾರಿ ಸಪ್ನ ಕುಲಾಲ್ ಪಾಡ್ಯಾರು (ಲಕ್ಷ್ಮಣ), ಕುಮಾರಿ ಸೌಮ್ಯ ಕುಲಾಲ್ ಪಾಡ್ಯಾರು (ಸುಗ್ರೀವ), ಆಕಾಶ್ ಜೈನ್ ಬನ್ನಡ್ಕ (ವಿಭೀಷಣ),  ಶ್ರವಣ್ ಬಲ್ಲಾಳ್ ಪಾಡ್ಯಾರು (ರಾವಣ), ಆಶಿತ್ ಸುವರ್ಣ ಪಾಡ್ಯಾರು (ರಾವಣದೂತ), ಕುಮಾರಿ ವಿಜೇತ ಕಾಮತ್ ಬನ್ನಡ್ಕ (ಅತಿಕಾಯ), ಅವರು ಅತ್ಯುತ್ತಮವಾಗಿ ಪಾತ್ರ ವೈಭವೀಕರಿಸಿದರು.

ಶ್ರೀರಾಮನಾಗಿ ಸಂಘದ ಹಿರಿಯ ಅರ್ಥಧಾರಿ ಡಿ.ವೆಂಕಟ್ರಮಣ ಮಾಸ್ತರ್ ಕಲ್ಲಡ್ಕ ಗುತ್ತು ಮತ್ತು ರಾಮಯ್ಯ ರೈ(ಲಕ್ಷಣ),  ಎ.ಜಿ ಮುದಿಯಾರು(ಕೌರವ), ವೀರಪ್ಪ ಸುವರ್ಣ ನಡುಬೈಲು(ಕೃಪ), ನಾರಾಯಣ ಪಾಟಾಳಿ ಮಯ್ಯಾಳ(ಕರ್ಣ) ಮತ್ತು   ರಾಮನಾಯ್ಕ ದೇಲಂಪಾಡಿ(ಅಶ್ವತ್ಥಾಮ) ಅರ್ಥಗಾರಿಕೆಯಲ್ಲಿ ಸಹಕರಿಸಿದರು. ಸುಶಾಂತ ಪಾಡ್ಯಾರು, ಪ್ರಮೋದ್ ಮಾರ್ನಾಡು, ಜಾಗೃತಿ ಶೆಟ್ಟಿ ಬನ್ನಡ್ಕ, ಸುಮಂತ್ ಪಾಡ್ಯಾರು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಲತಾ ಆಚಾರ್ಯ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸರೋಜಿನಿ ಬನಾರಿ ವಂದಿಸಿದರು.