ಕೇರಳ: ಮಾಲಿವುಡ್ ಚಿತ್ರರಂಗದ ಹಿರಿಯ ನಟ ಥಾಮಸ್ ಬರ್ಲೀ ಕರಿಶಿಂಗಲ್(94) ಮಂಗಳವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಥಾಮಸ್ ಬರ್ಲೀ ಕರಿಶಿಂಗಲ್ ಕೇರಳದ ಎರ್ನಾಕುಲಂನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಥಾಮಸ್ ಬರ್ಲೀ ಕರಿಶಿಂಗಲ್ ಅವರು ನಟನೆ ಮಾತ್ರವಲ್ಲದೆ, ನಿರ್ದೇಶನ, ಕಥೆ ಬರಹಗಾರ, ನಿರ್ಮಾಪಕ, ಸಂಭಾಷಣೆ ಬರಹಗಾರ ಮತ್ತು ಸಂಗೀತ ಸಂಯೋಜಕರಾಗಿಯೂ ಹೆಸರು ಗಳಿಸಿದ್ದರು. ಮೃತರು ಪತ್ನಿ ಸೋಫಿ ಮಕ್ಕಲಾದ ತರುಣ್ ಮತ್ತು ತಮಿನಾ ಅವರನ್ನು ಅಗಲಿದ್ದಾರೆ.