Friday, March 21, 2025
Homeಧಾರ್ಮಿಕಮಾ.10 - 15: ಕೊಡಕಾಲ ಶ್ರೀ ಮುಂಡಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ

ಮಾ.10 – 15: ಕೊಡಕಾಲ ಶ್ರೀ ಮುಂಡಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ

ಮಂಗಳೂರು : ಮಂಗಳೂರಿನ ಅಳಪೆ-ಕಣ್ಣೂರು ಗ್ರಾಮದ ಕೊಡಕಾಲ ಶ್ರೀ ವೈದ್ಯನಾಥ ಹಾಗೂ ಪರಿವಾರ ದೈವಗಳ ನವೀಕೃತ ಭಂಡಾರ ಮನೆ ಹಾಗೂ ಶಿಲಾಮಯ ಉತ್ಸವ ಗುಡಿಯಲ್ಲಿ ಶ್ರೀ ಮುಂಡಿತ್ತಾಯ (ವೈದ್ಯನಾಥ), ಶ್ರೀ ಮಹಿಷಂದಾಯ, ಶ್ರೀ ಸರಳ ಧೂಮಾವತಿ ಬಂಟ, ಶ್ರೀ ಕಾಂತೇರಿ ಧೂಮಾವತಿ ಬಂಟ, ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಜಾನುನಾಯಕ, ಶ್ರೀ ಪಿಲ್ಚಂಡಿ, ಶ್ರೀ ಕಲ್ಲುರ್ಟಿ ಕಲ್ಕುಡ ದೈವಗಳ ಪುನಃಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಹಾಗೂ ನೇಮ ಮಾ. 10ರಿಂದ 15ರ ವರೆಗೆ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಗಳೂರು ಮಹಾನಗರ ಪಾಲಿಕೆಯ ಮೇಯ‌ರ್ ಸುಧೀ‌ರ್ ಶೆಟ್ಟಿ ಕಣ್ಣೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ಮಾ. 10ರಂದು ಅಪರಾಹ್ನ 3ಕ್ಕೆ ಉಗ್ರಾಣ ಮುಹೂರ್ತ, 3.15ಕ್ಕೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ದೀಪ ಬೆಳಗಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸುವರು. ಮಾ. 11ರಂದು ಸಂಜೆ 6ಕ್ಕೆ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಮಾ. 12ರಂದು ಬೆಳಗ್ಗೆ ತೋರಣ ಮುಹೂರ್ತ, ನಾಗದೇವರಿಗೆ ಆಶ್ಲೇಷಾ ಪೂಜೆ, ಸಂಜೆ 6ಕ್ಕೆ ಸಭೆ, ಭರತನಾಟ್ಯ, ಗೀತಾ ಸಾಹಿತ್ಯ ಸಂಭ್ರಮ ಜರಗಲಿದೆ.

ಬ್ರಹ್ಮಕಲಶಾಭಿಷೇಕ

ಮಾ. 13ರಂದು ಪ್ರಾತಃ ಶ್ರೀ ವೈದ್ಯನಾಥ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಭಜನೆ, ಬೆಳಗ್ಗೆ 10.14ರಿಂದ ಬ್ರಹ್ಮಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ, 12.30ರಿಂದ ಸಭೆ ಜರಗಲಿದ್ದು ಸಂಸದ ನಳಿನ್ ಕುಮಾ‌ರ್ ಕಟೀಲು, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪಾಲ್ಗೊಳ್ಳಲಿದ್ದಾರೆ. ಅನಂತರ ತಾಳಮದ್ದಳೆ, ಸಂಜೆ 5ರಿಂದ ನೇಮ ಜರಗಲಿದೆ. ಮಾ. 14ರ ರಾತ್ರಿ 7ರಿಂದ ಶ್ರೀ ಕಲ್ಲುರ್ಟಿ ಕಲ್ಕುಡ ದೈವ ಹಾಗೂ ಶ್ರೀ ಗುಳಿಗ ದೈವಕ್ಕೆ ಕೋಲ, ಮಾ. 15ರಂದು ಸಂಜೆ 6 ರಿಂದ ಕಟೀಲು ಮೇಳದವರಿಂದ ಯಕ್ಷಗಾನ, ಮಾ. 17, 18ರಂದು ನೇಮ, ಮಾ. 24ರಿಂದ 28ರ ವರೆಗೆ ಉತ್ಸವಗಳು ಜರಗಲಿವೆ ಎಂದು ತಿಳಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ರೈ ಬಡಿಲಗುತ್ತು,ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ರಘುರಾಮ ಶೆಟ್ಟಿ ಹಿತ್ತಿಲುಮನೆ, ರಾಮಕೃಷ್ಣ ನಾಯ್ಕ ಪೇರ್ಲಜನನ, ಪಾಲಿಕೆ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ರೂಪಶ್ರೀ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ವಾಸುದೇವ ಕೋಟ್ಯಾನ್ ಬಲ್ಲೂರುಗುತ್ತು, ನಿಖಿತ್ ಕೊಟ್ಟಾರಿ ಕಣ್ಣೂರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular