ಪುತ್ತೂರು: ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಗುರುಕುಲ ಕಲಾ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಸಹಕಾರದೊಂದಿಗೆ, ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆ ಪುತ್ತೂರು ಆಶ್ರಯದಲ್ಲಿ, ಮುಂಗಾರು ಕವಿಗೋಷ್ಠಿ( ಕವಿತೆಗಳ ಪುಷ್ಪವೃಷ್ಠಿ ) ಜು.17ರಂದು ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ಹೋಟೆಲ್ ಸ್ವಾಗತ್ ಒಂದನೇ ಮಹಡಿಯಲ್ಲಿ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಭಾಗವಹಿಸುವವರು ತಮ್ಮ ಸೂಕ್ಷ್ಮ ಪರಿಚಯದೊಂದಿಗೆ ಹೆಸರು ನೋಂದಾಯಿಸಬೇಕು.
ಕವಿತೆಯ ವಿಷಯ ಕನ್ನಡ ನಾಡು ನುಡಿ ಸಂಸ್ಕೃತಿ, ಪ್ರಕೃತಿ ಕುರಿತಾಗಿರಬೇಕು. ಯಾವುದೇ ಜಾತಿ, ಧರ್ಮ, ದೇವರು ಮತ್ತು ರಾಜಕೀಯ ನಿಂದನೆಗೆ ಅವಕಾಶವಿಲ್ಲ. ನೋಂದಣಿಗೆ ಜುಲೈ 10 ಕೊನೆಯ ದಿನ.
ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಶಾಲಾ /ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲೆಯ ಸಾಹಿತಿಗಳಿಗೆ ಅವಕಾಶವಿದ್ದು, ಕವಿಗೋಷ್ಠಿ ಸಂಚಾಲಕಿ ಪ್ರಿಯಾ ಸುಳ್ಯ ಇವರ ವಾಟ್ಸಪ್ಪ್ ಸಂಖ್ಯೆ 9731470936 ಸಂಪರ್ಕಿಸಬಹುದು.