ಮುಲ್ಕಿ: ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಅಂಚನ್ ರವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಸತೀಶ್ ಅಂಚನ್ ಮಾತನಾಡಿ ಮುಲ್ಕಿ ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಂಪೂರ್ಣ ಅಭಿವೃದ್ಧಿಗೆ ತೊಡಗಿಸುವುದರ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ಸುರೇಂದ್ರ ಪಣಿಯೂರು, ಎಚ್ಎಸ್ ಬ್ಯಾಂಕ್ ಉಪಾಧ್ಯಕ್ಷ ಶಿಶಿರ್ ದೇಶಪಾಂಡೆ , ಬಂಕಿನಾಯಕರು ಮುಲ್ಕಿ ನ.ಪಂ. ಸದಸ್ಯರಾದ ಹರ್ಷರಾಜ ಶೆಟ್ಟಿ,ಸುಭಾಷ್ ಶೆಟ್ಟಿ ,ದಯಾವತಿ ಅಂಚನ್, ರಾಧಿಕಾ ಕೋಟ್ಯಾನ್,ಉದ್ಯಮಿ ಜೋನ್ ಕ್ವಾಡ್ರಾಸ್, ಮೊಗವೀರ ಪತ್ರಿಕೆ ಸಂಪಾದಕ ಅಶೋಕ್ ಸುವರ್ಣ, ಹೊಸ ಅಂಗಣದ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ವಾಮನ್ ಕೋಟ್ಯಾನ್ ನಡಿಕುದ್ರು, ಬಂಕಿನಾಯಕರು, ರಮೇಶ್ ಅಮೀನ್ ಕೊಕ್ಕರಕಲ್, ನಂದಾ ಪಾಯಸ್, ಲತಾ ಶೇಖರ್ ರವಿಚಂದ್ರ ರಾವ್, ರಮಾನಾಥ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು