ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಜೈನ ಪದವಿಪೂರ್ವ ಕಾಲೇಜು, ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ “ಕವಿ ನಾಗಚಂದ್ರ” ಉಪನ್ಯಾಸ ಕಾರ್ಯಕ್ರಮವು ಸೆ.25 ರಂದು ಸೋಮವಾರ ಮಧ್ಯಾಹ್ನ 2.30ಕ್ಕೆ ಜೈನ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಪ್ರಭಾತ್ ಬಲ್ನಾಡ್ ಪ್ರಾಂಶುಪಾಲರು ಜೈನ ಪ.ಪೂ. ಕಾಲೇಜು, ಮೂಡುಬಿದಿರೆ , ಅಧ್ಯಕ್ಷಾರಾಗಿ ಕ.ಸಾ.ಪ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರು ಶ್ರೀ ವೇಣುಗೋಪಾಲ ಶೆಟ್ಟಿ ಕೆ.,ಸಂಪನ್ಮೂಲ ವ್ಯಕ್ತಿ ಶ್ರೀ ಟಿ.ಎ.ಎನ್. ಖಂಡಿಗೆ ಉಪನ್ಯಾಸಕರು, ಸಾಹಿತಿ ಹಾಗೂ ಕೆ. ಉದಯ ಕುಮಾರ್ ವಿಭಾಗ ಮುಖ್ಯಸ್ಥರು. ಕನ್ನಡ ವಿಭಾಗ ಜೈನ ಪ.ಪೂ. ಕಾಲೇಜು ಮೂಡುಬಿದಿರೆ ಉಪಸ್ಥಿತತರಿರುವರು.