ಮೂಡುಬಿದಿರೆ: ಮೂಡುಬಿದಿರೆ ಜೈನ ಪೇಟೆ ಯ ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ 2023-24ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿದ್ದು ಕಾಲೇಜಿನ ಹಾಜರಾದ ವಾಣಿಜ್ಯ ವಿಭಾಗದ 30 ವಿದ್ಯಾರ್ಥಿಗಳಲ್ಲಿ 29 ಜನ ಉತ್ತೀರ್ಣರಾಗಿದ್ದಾರೆ 5 ವಿಶಿಷ್ಟ ಶ್ರೇಣಿ ಪಡೆದು ಕೊಂಡಿದ್ದು, ಅಪೂರ್ವ 560/93%, ಶ್ರೀಯಾ 560/93% ಸಮಾನ ಅಂಕ ಪಡೆದಿದ್ದು ಶ್ರಾವ್ಯ 535/89%, ಶ್ರೀ ಲಕ್ಷ್ಮಿ 525/87%, ಪ್ರೆಕ್ಷಾ 517/86% ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ ಉಳಿದ ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತಿರ್ಣರಾಗಿರುತ್ತಾರೆ.
ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಬಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಾಗಿದ್ದು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶ ಬರಲು ಕಾರಣರಾದ ಪ್ರಾಂಶುಪಾಲೆ, ಶಿಕ್ಷಕ ವರ್ಗದವರನ್ನು ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಮೂಡುಬಿದಿರೆ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಹರಸಿ ಆಶೀರ್ವದಿಸಿ ಅಭಿನಂದಿಸಿದರು.
ಸಂಸ್ಥೆ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಪ್ರಾಯೋಜಕತ್ವದಲ್ಲಿ ಬಡ ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಮಧ್ಯಾಹ್ನದ ಉಚಿತ ಊಟ ವ್ಯವಸ್ಥೆಯೊಂದಿಗೆ ಶಿಕ್ಷಣ ನೀಡಲಾಗುತ್ತದೆ.