ಶಿರ್ವ: ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠಾ ಅಷ್ಟಬಂಧ, ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಇವ ಕಾರ್ಯಕ್ರಮಗಳು ಎ.18ರಿಂದ29ರ ವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಎ. 9 ರಂದು ದೇಗುಲದ ಆವರಣದಲ್ಲಿ ಚಪ್ಪರ ಮುಹೂರ್ತದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕ್ಷೇತದ ತಂತ್ರಿಯವರಾದ ವಿದ್ವಾನ್ ಸಗ್ರಿ ಹರಿದಾಸ್ ಐತಾಳ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ದೇಗುಲದ ಮೊಕ್ತೇಸರ/ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಎಚ್. ಭಾಸ್ಕರ ಶೆಟ್ಟಿ, ಬ್ರಹ್ಮಶ್ರೀ ಮುರಳೀಧರ ತಂತ್ರಿ ದೇರೇಬೈಲು, ದೇಗುಲದ ಅರ್ಚಕರಾದ ಶಶಿಕಾಂತ ಉಪಾಧ್ಯಾಯ ಮತ್ತು ಸುಬ್ರಹ್ಮಣ್ಯ ಆಚಾರ್ಯ, ಪವಿತ್ರಪಾಣಿ ರಾಮಮೂರ್ತಿ ಹೆಬ್ಬಾರ್, ಸುದರ್ಶನ ಆಚಾರ್ಯ, ಲಕ್ಷ್ಮೀನಾರಾಯಣ ಸರಳಾಯ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೆಳ್ಳೆ ರಾಜೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಬೆಳ್ಳೆ ನಿರಂಜನ್ ರಾವ್, ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್, ಮೂಡುಬೆಳ್ಳಿ ವಿಖ್ಯಾತ್ ಭಟ್.ವೆಂಕಟರಮಣ ರಾವ್, ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಬೆಳ್ಳೆ ಮೇಲ್ಮನೆ ರೇಖಾ ಶೆಟ್ಟಿ, ಸುರೇಶ್ ಪಾಲೇಮಾರ್, ಸಂದೀಪ್ ಸಾಲಿಯಾನ್, ಶಿಲ್ಪಿ ನಾರಾಯಣ ಸ್ವಾಮಿ, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.