Sunday, July 14, 2024
Homeಮೂಡುಬಿದಿರೆಮೂಡುಬಿದಿರೆ: ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ 2023-2024 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ...

ಮೂಡುಬಿದಿರೆ: ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ 2023-2024 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಮೂಡುಬಿದಿರೆ: ಬನ್ನಡ್ಕದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ 2023-2024 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಮಾಂಟ್ರಾಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿಸಲಾಯಿತು. ವಿ.ವಿ.ಕಾಲೇಜು ಬನ್ನಡ್ಕ ಇಲ್ಲಿನ ಸಂಯೋಜಕರಾದ ಡಾ.ದಯಾನಂದ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಮಾಂಟ್ರಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಸಮಾರೋಪ ಭಾಷಣ ಮಾಡಿದರು, ವೇದಿಕೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಮೃದುಲಾ ಕುಮಾರಿ, ಶಾಂತಾರಾಮ್, ಸಂಜೀವ, ಶೀತಲ್ ಕುಮಾರ್, ಪ್ರಶಾಂತ್ ಕುಮಾರ್ ಜೈನ್, ಧನಂಜಯ ಆಳ್ವ ಉಪಸ್ಥಿತರಿದ್ದರು. ಲೀಕ್ಷಿತಾ ಸ್ವಾಗತಿಸಿದರು, ಗಾಯತ್ರಿ ವರದಿ ವಾಚಿಸಿದರು, ರವಿರಾಜ್ ಬಿ.ಜಿ ಶಿಬಿರ ಸಾಗಿದ ಹಾದಿ ಬಗ್ಗೆ ತಿಳಿಸಿದರು. ಸುಶ್ಮಿತಾ ನಿರೂಪಿಸಿದರು, ಡಾ.ಅಶೋಕ್ ಮುರಾಳ ವಂದಿಸಿದರು.

RELATED ARTICLES
- Advertisment -
Google search engine

Most Popular