ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ 2024-25ನೇ ಸಾಲಿನ ತರಗತಿ ಪ್ರಾರಂಭೋತ್ಸವ ಇಂದು ನಡೆಯಿತು. ಸ್ವಸ್ತಿಶ್ರೀ ಭಟ್ಟಾರಕ ಭವನ, ರಮಾರಾಣಿ ಶೋಧ ಸಂಸ್ಥಾನದಲ್ಲಿ ಇಂದು ಬೆಳಗ್ಗೆ ಪರಮಪೂಜ್ಯ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯ ಹಾಗೂ ಅಧ್ಯಕ್ಷತೆಯಲ್ಲಿ ತರಗತಿ ಪ್ರಾರಂಭೋತ್ಸವ ಸಮಾರಂಭ ನಡೆಯಿತು. ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್ ನ ಅಧ್ಯಕ್ಷರು, ಪಂಡಿತ್ ರೆಸಾರ್ಟ್ ಮುಖ್ಯಸ್ಥರಾದ ಶ್ರೀಲಾಲ್ ಗೋಯಲ್ ಸಮಾರಂಭ ಉದ್ಘಾಟಿಸಿದರು.
ಹಿರಿಯ ನ್ಯಾಯವಾದಿ ಬಾಹುಬಲಿ ಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನ್ಯಾಯವಾದಿ ಬಾಹುಬಲಿ ಪ್ರಸಾದ್ ನಗದು ಬಹುಮಾನ ವಿತರಿಸಿದರು. ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರು, ಅತಿ ಹೆಚ್ಚು ಅಂಕ ಪಡೆದ ಅಪೂರ್ವ, ಶ್ರೀಯಾ, ಶ್ರಾವ್ಯ, ಶ್ರೀಲಕ್ಷ್ಮಿ, ಪ್ರೇಕ್ಷಾ ಮುಂತಾದವರಿಗೆ ಸ್ವಾಮೀಜಿಯವರು ಶಾಲು ಹಾಕಿ, ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ಶ್ರೀ ದವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಪರಮಪೂಜ್ಯ ಚಾರುಕೀರ್ತಿ ಸ್ವಾಮೀಜಿ ವಿತರಿಸಿದರು. ಶಿಕ್ಷಣ ದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿ ಗಳು ಪ್ರಾಮಾಣಿಕ ವಾಗಿ ವಿದ್ಯಾರ್ಜನೆ ಮಾಡ ಬೇಕು. ವಿದ್ಯಾರ್ಥಿಗಳು ವಿನಯವಂತರಾಗಿ ಗುರು ಹಿರಿಯರ ಬಗ್ಗೆ ಗೌರವ ನೀಡಬೇಕು. ಉತ್ತಮ ವಿದ್ಯಾರ್ಥಿ ಸರ್ವರಿಂದ ಗೌರವಿಸಲ್ಪಡುತ್ತಾನೆ ಎಂದು ಇದೇ ವೇಳೆ ಮಾತನಾಡಿದ ಸ್ವಾಮೀಜಿಯವರು ಹೇಳಿದರು. ಸ್ವಸ್ತಿಶ್ರೀ ಕಾಲೇಜು ನೀಡುವ ಶಿಕ್ಷಣ ಸೌಲಭ್ಯ ವನ್ನು ಗ್ರಾಮೀಣ ವಿದ್ಯಾರ್ಥಿ ಗಳು ಪಡೆಯಲಿ ಎಂದು ನ್ಯಾಯವಾದಿ ಬಾಹುಬಲಿ ಪ್ರಸಾದ್ ಹೇಳಿದರು.
ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ ಜೀವನ. ಚೆನ್ನಾಗಿ ಓದಿ ಉತ್ತಮ ಅಂಕ ಪಡೆದುಕೊಂಡು ಉನ್ನತ ಅಭ್ಯಾಸ ಮಾಡಿ ಉನ್ನತಿಯನ್ನು ಪಡೆಯಿರಿ ಎಂದು ಲಾಲ್ ಗೋಯಲ್ ಶುಭ ಹಾರೈಸಿದರು ಅತಿಥಿಗಳನ್ನು ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕ ಹಿತೇಶ್ ಧನ್ಯವಾದವಿತರು. ಉಪನ್ಯಾಸಕಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಜಾತಾ, ಪವನ, ಶ್ರೀ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಉಪಸ್ಥಿತರಿದ್ದರು.