ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು ಇಲ್ಲಿ ಸಪ್ಟೆಂಬರ್ ತಿಂಗಳ ಸಂಭ್ರಮ ಶನಿವಾರದ ಪ್ರಯುಕ್ತ ಪೌಷ್ಠಿಕತೆ ಸ್ವಾಸ್ಥ್ಯ ಮತ್ತು ಶುಚಿತ್ವ ಇದರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ವಿದ್ಯಾರ್ಥಿಗಳು ಸುಮಾರು 40ಕ್ಕಿಂತ ಹೆಚ್ಚಿನ ಅಡುಗೆಗಳನ್ನು ತಯಾರಿಸಿದ್ದರು ತೀರ್ಪುಗಾರರಾಗಿ ಪಾಲಡ್ಕ ಅಂಗನವಾಡಿಯ ಶಿಕ್ಷಕಿ ಶಿಲ್ಪಾ ಭಂಡಾರಿ ಮತ್ತು ಮೂಡುಬಿದಿರೆಯ ಲಿಟಲ್ ಪ್ರಿನ್ಸೆಸ್ ಬ್ಯೂಟಿ ಪಾರ್ಲರ್ ಮಾಲಕಿ ರವಿ ಕಲಾಭಟ್ ಸಹಕರಿಸಿದರು. ಪೌಷ್ಟಿಕತೆ ಮತ್ತು ಶುಚಿತ್ವದ ಮೂಲಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ನಿಮ್ಮ ಬಗ್ಗೆ ಮುಖ್ಯೋಪಾಧ್ಯಾಯರು ಮಾತನಾಡಿದರು. ಮುಖ್ಯ ಶಿಕ್ಷಕ ಪ್ರಸನ್ನ Shenoy ಅತಿಥಿ ಶಿಕ್ಷಕಿ ಮಲ್ಲಿಕಾ ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಪೋಷಕರಾದ ಮಾಲತಿ ಮತ್ತು ಇತರರು ಉಪಸ್ಥಿತರಿದ್ದರು. ಇಂದು ಶಾಲೆಯಲ್ಲಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ 7ನೇ ತರಗತಿಯ ಮನೀಶ್ ಪ್ರಥಮ ಬಹುಮಾನ ಏಳನೇ ತರಗತಿಯ ವಂಶಿ ಮತ್ತು 6ನೇ ತರಗತಿಯ ಹರ್ಷಿತ್ ದ್ವಿತೀಯ ಬಹುಮಾನ ಏಳನೇ ತರಗತಿಯ ಕೃತಿ ಮತ್ತು ಆರನೇ ತರಗತಿಯ ಸಮೀಕ್ಷಾ ತೃತೀಯ ಬಹುಮಾನ ಗಳಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
ಮೂಡುಬಿದಿರೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು ತಿಂಗಳ ಸಂಭ್ರಮ
RELATED ARTICLES