Saturday, July 20, 2024
Homeಅಪರಾಧಮೂಡುಬಿದಿರೆ: ದುಷ್ಕರ್ಮಿಗಳಿಂದ ಫ್ಲೆಕ್ಸ್‌ನಲ್ಲಿ ಮಿಥುನ್ ರೈ ಭಾವಚಿತ್ರಕ್ಕೆ ಹಾನಿ

ಮೂಡುಬಿದಿರೆ: ದುಷ್ಕರ್ಮಿಗಳಿಂದ ಫ್ಲೆಕ್ಸ್‌ನಲ್ಲಿ ಮಿಥುನ್ ರೈ ಭಾವಚಿತ್ರಕ್ಕೆ ಹಾನಿ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಆದಿತ್ಯವಾರ ಸಾಯಂಕಾಲ ನಡೆಯಲಿರುವ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಸ್ವಾಗತ ಕೋರಿ ಹಾಕಲಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮಿಥುನ್ ರೈಯವರು ಶುಭಕೋರಿದ ಫ್ಲೆಕ್ಸ್‌ಗಳನ್ನು ದುಷ್ಕರ್ಮಿಗಳು ಹರಿದು ಹಾನಿಗೊಳಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ವಿರೋಧಿಗಳು ಮಿಥುನ್ ರೈಯವರನ್ನು ಕೇಂದ್ರಿಕರಿಸಿ ಅವರ ಭಾವಚಿತ್ರವಿರುವ ಜಾಗವನ್ನು ಕತ್ತರಿಸಿ ತೆಗೆದು ಹಾನಿಗೊಳಿಸಿದ್ದಾರೆ.

ಈ ಫ್ಲೆಕ್ಸ್‌ಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರಿಗೆ ಮತ್ತು ಫಲಾನುಭವಿಗಳಿಗೆ ಸ್ವಾಗತ ಕೋರಲಾಗಿತ್ತು. ಈ ನಿಟ್ಟಿನಲ್ಲಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಕೆಪಿಸಿಸಿ ಸದಸ್ಯ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ವಾಲ್ಪಾಡಿ ಪಂಚಾಯತು ಸದಸ್ಯ ಅರುಣ್ ಕುಮಾರ್ ಶೆಟ್ಟಿ ಮುಂತಾದವರು ಪೋಲಿಸ್ ಠಾಣೆಗೆ ತೆರಳಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular