Tuesday, December 3, 2024
Homeಮೂಡುಬಿದಿರೆಮೂಡುಬಿದಿರೆ : ಪತಿಯನ್ನು ಕಳೆದುಕೊಂಡ ನೋವಿನಿಂದ ಆವೇಶಿತ ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ : ಪತಿಯನ್ನು ಕಳೆದುಕೊಂಡ ನೋವಿನಿಂದ ಆವೇಶಿತ ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ : ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ವಿಧವೆ ಮಹಿಳೆಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮೂಡುಬಿದಿರೆಯ ಕೇಮಾರಿನಲ್ಲಿ ನಡೆದಿದೆ. ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರು ನಡಿಹಿಲ್ಲು ನಿವಾಸಿ ಪ್ರಮೀಳಾ (36ವ)ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಗಂಡನನ್ನು ಕಳೆದುಕೊಂಡ ಮೇಲೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಕುಡಿತದ ಚಟವನ್ನು ಹೊಂದಿದ್ದ ಪ್ರಮೀಳಾ ಅವರು ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನ ಸ್ಥಳಕ್ಕೆ ಬಂದ ದ. ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕೆ ಪಿ ಸುಚರಿತ ಶೆಟ್ಟಿ ಪಾಲಡ್ಕ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ ಕೇಮಾರ್ ಊರವರ ಜೊತೆ ಸೇರಿ ಸಹಕರಿಸಿದರು.

ಮೃತ ದೇಹವನ್ನು ಪಡೆದುಕೊಳ್ಳದ ತವರು ಮನೆ
ಕಡಂದಲೆ ಬಿ.ಟಿ.ರೋಡ್ ನ ಪ್ರಮೀಳಾ ಗೌಡ್ತಿ ಅವರು ಕಳೆದ 16 ವರ್ಷಗಳ ಹಿಂದೆ ಕೇಮಾರಿನ ದಲಿತ ಯುವಕ ಸೇಸಪ್ಪ ಎಂವರನ್ನು ಪ್ರೀತಿಸಿ ಮದುವೆಯಾಗಿ ಹೆತ್ತವರಿಂದ ಸಂಬಂಧವನ್ನು ಕಳೆದುಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಆಕೆ ಏಕಾಂಗಿಯಾಗಿದ್ದರು ಮತ್ತು ಕುಡಿತಕ್ಕೆ ಬಲಿಯಾಗಿದ್ದರು. ಇದೀಗ ಆತ್ಯಹತ್ಯೆ ಮಾಡಿಕೊಂಡ ಪ್ರಮೀಳಾ ಅವರ ಮೃತದೇಹವನ್ನು ಪಡೆದುಕೊಳ್ಳಲು ತವರು ಮನೆಯವರು ನಿರಾಕರಿಸಿದ್ದರಿಂದ ಸಾರ್ವಜನಿಕರ ಸಹಕಾರದಿಂದ ಪೊಲೀಸರು ದಫನ ಮಾಡುವುದೆಂದು ತೀರ್ಮಾನಿಸಿದ್ದಾರೆ.

RELATED ARTICLES
- Advertisment -
Google search engine

Most Popular